ಉಡುಪಿ: ಅಯೋಧ್ಯ ರಾಮ ಮಂದಿರ ವಿವಾದಿತ ಕ್ಷೇತ್ರ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಪಲಿಮಾರು ವಿದ್ಯಾಧೀಶ ಶ್ರೀಗಳು, ರಾಮ ಮಂದಿರ ವಿಚಾರದಲ್ಲಿ ಕೆಲ ನಾಯಕರು ಸುಪ್ರೀಂ ಕೋರ್ಟ್ ಆದೇಶವನ್ನೂ ಒಪ್ಪುತ್ತಿಲ್ಲ, ಐದು ಜನ ನ್ಯಾಯಾಧೀಶರು ಅವರಲ್ಲಿ ಓರ್ವರು ಮುಸ್ಲಿಂ ಸಮುದಾಯದ ನ್ಯಾಯಾಧೀಶರೇ ರಾಮ ಮಂದಿರ ನಿರ್ಮಾಣದ ಬಗ್ಗೆ ತೀರ್ಪು ನೀಡಿದ್ದಾರೆ. ಆದರೆ ವಕೀಲರಾಗಿದ್ದ ಓರ್ವ ಜನನಾಯಕರು ಈ ತೀರ್ಪನ್ನು ಒಪ್ಪುತ್ತಿಲ್ಲ ಎಂದಾದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಮ ಮಂದಿರಕ್ಕೆ ಬೇಕಾದ ಎಲ್ಲಾ ಸಾಕ್ಷ್ಯ, ಪುರಾವೆಗಳನ್ನು ಭೂಗರ್ಭದಿಂದ ಪಡೆದು ಪರಿಶೀಲಿಸಿ ತೀರ್ಪು ನೀಡಲಾಗಿದೆ. ಹಾಗಿರುವಾಗ ಕೆಲ ಜನನಾಯಕರು ರಾಮ ಮಂದಿರ ನಿರ್ಮಾಣಕ್ಕೆ 10 ರೂಪಾಯಿ ದೇಣಿಗೆ ನೀಡಲು ಅದು ವಿವಾದಿತ ಭೂಮಿ ದೇಣಿಗೆ ನೀಡಲ್ಲ ಎನ್ನುತ್ತಿದ್ದಾರೆ ಇಂಥಹ ಧೋರಣೆ ಡಕಾಯಿತರಿಗಿಂತ ಡೇಂಜರ್ ಎಂದು ಹೇಳಿದ್ದಾರೆ.
ಭರ್ಜರಿ ಗುಡ್ ನ್ಯೂಸ್: LPG ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಸಿಹಿಸುದ್ದಿ
ಇಂದು ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟಗಳನ್ನು ನೀಡುತ್ತಿದ್ದಾರೆ ಎಂದು ಪಲಿಮಾರು ಶ್ರೀಗಳು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.