ನೆರೆ ರಾಷ್ಟ್ರ ಚೀನಾ ಕುರಿತು ಪ್ರಧಾನಿ ಮೋದಿ ಅವರಿಗೆ ಭಯ ಇದೆ. ಇದನ್ನು ಅರಿತಿರುವ ಚೀನಾ ಹೀಗಾಗಿಯೇ ಭಾರತದ ನೆಲವನ್ನು ಆಕ್ರಮಿಸಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನದ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಅಲ್ಲಿನ ವಕೀಲರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ್ದಾರೆ.
ನರೇಂದ್ರ ಮೋದಿ ಖಡಕ್ ಸಂದೇಶಕ್ಕೆ ಬೆಚ್ಚಿಬಿದ್ದಿದ್ದ ಪಾಕ್…! ಮಹತ್ವದ ವಿಷಯ ಬಹಿರಂಗಪಡಿಸಿದ ವಾಯುಪಡೆ ಮಾಜಿ ಅಧಿಕಾರಿ
ಮೊದಲ ಬಾರಿಗೆ ಚೀನಾ ಅತಿಕ್ರಮಣ ನಡೆಸಿದಾಗ ನರೇಂದ್ರ ಮೋದಿಯವರು ಭಾರತದೊಳಕ್ಕೆ ಯಾರು ಬಂದಿಲ್ಲ ಎಂದು ಹೇಳಿದ್ದರು. ಹೀಗಾಗಿ ನರೇಂದ್ರ ಮೋದಿ ನಮಗೆ ಹೆದರಿಕೊಂಡಿದ್ದಾರೆ ಎಂಬುದನ್ನು ಅರಿತ ಚೀನಾ ಮತ್ತಷ್ಟು ಪ್ರದೇಶವನ್ನು ಅತಿಕ್ರಮಿಸಿಕೊಂಡಿತು ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.