alex Certify ಕೊಲೆ ಪ್ರಕರಣದಲ್ಲಿ ಹುಂಜವನ್ನ ಅರೆಸ್ಟ್ ಮಾಡಿದ ಪೊಲೀಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆ ಪ್ರಕರಣದಲ್ಲಿ ಹುಂಜವನ್ನ ಅರೆಸ್ಟ್ ಮಾಡಿದ ಪೊಲೀಸ್…?

ಕೋಳಿ ಕಾಳಗದಲ್ಲಿ ಭಾಗಿಯಾಗಿದ್ದ ಹುಂಜವೊಂದು ತನ್ನ 45 ವರ್ಷದ ಮಾಲೀಕನ ಕೊಲೆಗೆ ಕಾರಣವಾಗಿದ್ದು ಈ ಪ್ರಕರಣ ಸಂಬಂಧ ಪೊಲೀಸರು ಹುಂಜವನ್ನೇ ಕಸ್ಟಡಿಗೆ ತೆಗೆದುಕೊಂಡ ವಿಚಿತ್ರ ಘಟನೆ ತೆಲಂಗಾಣ ರಾಜ್ಯದಲ್ಲಿ ವರದಿಯಾಗಿದೆ. ಜಗ್ತಿಯಲ್​ ಜಿಲ್ಲೆಯ ಲೋಥುನುರ್​ ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಈ ಘಟನೆ ನಡೆದಿದೆ.

ಥನುಗುಲ್ಲ ಸತೀಶ್​ ಎಂಬಾತ ಕಾನೂನು ನಿರ್ಬಂಧದ ಬಳಿಕವೂ ಕೋಳಿ ಕಾಳಗಕ್ಕೆ ಹುಂಜವೊಂದನ್ನ ತಂದಿದ್ದ. ಕೋಡಿ ಕತ್ತಿ ಎಂದೇ ಕರೆಯಲಾಗುವ ಚಾಕುವನ್ನ ಹುಂಜದ ಕಾಲಿಗೆ ಬಲವಾಗಿ ಕಟ್ಟಿದ್ದ. ಆದರೆ ಇದೇ ಸತೀಶ್​ ಜೀವಕ್ಕೆ ಸಂಚಕಾರವಾಗಿ ಪರಿಣಮಿಸಿದೆ. ಈ ಚಾಕು ಅಕಸ್ಮಾತ್​ ಆಗಿ ಸತೀಶ್​ ತೊಡೆ ಸಂಧುವಿನಲ್ಲಿ ಬಲವಾದ ಗಾಯವನ್ನ ಮಾಡಿದೆ. ತೀವ್ರ ಗಾಯಗೊಂಡ ಸತೀಶ್​ರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸತೀಶ್​ ಸಾವನ್ನಪ್ಪಿದ್ದಾನೆ.

ಬುದ್ಧಿವಾದ ಹೇಳಿದ್ರೂ ಪ್ರೀತಿ ಮುಂದುವರೆಸಿದ್ದಕ್ಕೆ ಮರ್ಮಾಂಗ ಕತ್ತರಿಸಿ ಕೊಲೆ

ತೆಲಂಗಾಣದಲ್ಲಿ ಕೋಳಿ ಕಾಳಗಕ್ಕೆ ನಿರ್ಬಂಧ ಹೇರಲಾಗಿದೆ. ಆದರೂ ಸಹ ಕೆಲವಷ್ಟು ಮಂದಿ ಸೇರಿಕೊಂಡು ಯಲ್ಲಮ್ಮ ದೇವಸ್ಥಾನದ ಬಳಿಯಲ್ಲಿ ಅಕ್ರಮವಾಗಿ ಕೋಳಿ ಕಾಳಗವನ್ನ ಏರ್ಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಂಜವನ್ನ ಗೊಲ್ಲಾಪಲ್ಲಿ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ಕೋಳಿಯನ್ನ ಬಂಧಿಸಿಟ್ಟ ಪೊಲೀಸರು ಅದಕ್ಕೆ ಬೇಕಾದ ಆಹಾರವನ್ನ ಒದಗಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಒಬ್ಬ ಕೋಳಿ ಕಾಳಗ ಆಯೋಜಕನನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ಪೊಲೀಸರು ಕೋಳಿಯನ್ನ ಬಂಧಿಸಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ವರದಿಗಳನ್ನ ತಳ್ಳಿ ಹಾಕಿದ ಗೊಲ್ಲಪಲ್ಲಿ ಎಸ್​​ಹೆಚ್​ಓ ಬಿ. ಜೀವನ್​, ನಾವು ಹುಂಜವನ್ನ ಬಂಧಿಸಿಯೂ ಇಲ್ಲ, ವಶಕ್ಕೂ ಪಡೆದಿಲ್ಲ. ಬದಲಾಗಿ ಅದನ್ನ ರಕ್ಷಿಸಿದ್ದೇವೆ ಹಾಗೂ ಫಾರ್ಮ್​ಹೌಸ್​ಗೆ ರವಾನಿಸಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...