ಬೆರಗಾಗಿಸುತ್ತೆ ಈ ಭಿಕ್ಷುಕರು ಮಾಡಿರುವ ‘ಸಂಪಾದನೆ’ 28-02-2021 6:25AM IST / No Comments / Posted In: Latest News, India ನೀವು ವರ್ಷಕ್ಕೆ ಎಷ್ಟು ಸಂಪಾದನೆ ಮಾಡ್ತೀರಾ ಹಾಗೂ ಎಷ್ಟು ಉಳಿತಾಯ ಮಾಡ್ತೀರಾ ಅನ್ನೋದು ನೀವು ಮಾಡ್ತಿರುವ ಕೆಲಸ ಹಾಗೂ ನಿಮ್ಮ ಜೀವನಶೈಲಿ ಮೇಲೆ ಅವಲಂಭಿತವಾಗಿ ಇರುತ್ತೆ. ನಿಮಗಿಂತ ಭಿಕ್ಷಕರೂ ಜಾಸ್ತಿ ಹಣ ಗಳಿಕೆ ಮಾಡ್ತಾರೆ ಅಂದರೆ ನಂಬೋಕೆ ಸಾಧ್ಯವಾ..? ಭಾರತದಲ್ಲಿ ಆತ್ಯಂತ ಶ್ರೀಮಂತ ಭಿಕ್ಷಕರು ಹಾಗೂ ಅವರ ಸಂಪತ್ತು ಎಷ್ಟು ಅನ್ನೋದು ನಿಮಗೆ ತಿಳಿದಿದೆಯೇ…? ಲಕ್ಷಗಟ್ಟಲೇ ಸಂಪಾದನೆ ಇದ್ದರೂ ಕೂಡ ಕೆಲವರು ಇನ್ನೂ ಭಿಕ್ಷಾಟನೆಯನ್ನ ಮಾತ್ರ ಬಿಟ್ಟಿಲ್ಲ. 1. ಭರತ್ ಜೈನ್ : ಭರತ್ ಜೈನ್ ಮುಂಬೈನ ಪರೆಲ್ ಪ್ರಾಂತ್ಯದಲ್ಲಿ ಕೆಲಸ ಮಾಡ್ತಾರೆ. ಇವರು 70 ಲಕ್ಷ ರೂಪಾಯಿ ಮೌಲ್ಯದ ಎರಡು ಅಪಾರ್ಟ್ಮೆಂಟ್ಗಳನ್ನ ಹೊಂದಿದ್ದಾರೆ. ಇವರು ತಿಂಗಳಿಗೆ 75 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರಂತೆ. 2. ಲಕ್ಷ್ಮೀ ದಾಸ್ : ಲಕ್ಷ್ಮೀ ದಾಸ್ 16 ವರ್ಷದವಳಾಗಿದ್ದಾಗಲೇ ಅಂದರೆ 1964ರಿಂದಲೇ ಭಿಕ್ಷಾಟನೆ ಆರಂಭಿಸಿದ್ದರು. 50 ವರ್ಷದ ಭಿಕ್ಷಾಟನೆ ಜೀವನದಲ್ಲಿ ಸಿಕ್ಕಾಪಟ್ಟೆ ಹಣ ಸಂಪಾದಿಸಿದ್ದಾರೆ. 3. ಕೃಷ್ಣ ಕುಮಾರ್ : ಮುಂಬೈನ ಚರ್ನಿ ರಸ್ತೆಯಲ್ಲಿ ಭಿಕ್ಷಾಟನೆ ಮಾಡುವ ಇವರು ಸ್ವಂತ ಫ್ಲ್ಯಾಟ್ ಖರೀದಿ ಮಾಡಿದ್ದು ಸಹೋದರನ ಜೊತೆ ಇದ್ದಾರೆ. ದಿನಕ್ಕೆ ಇವರು 1500 ರೂಪಾಯಿ ಸಂಪಾದಿಸುತ್ತಾರೆ. 4. ಬುರ್ಜು ಚಂದ್ರ ಆಜಾದ್ : ಬುರ್ಜು ಚಂದ್ರ ಆಜಾದ್ 8.77 ಲಕ್ಷ ರೂಪಾಯಿ ಎಫ್ಡಿ ಹೊಂದಿದ್ದಾರೆ ಹಾಗೂ 1.5 ಲಕ್ಷ ರೂಪಾಯಿ ನಗದನ್ನ ಹೊಂದಿದ್ದಾರೆ. 2019ರಲ್ಲಿ ಇವರು ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಪೊಲೀಸರು ಈ ಸಂಪತ್ತನ್ನ ಲೆಕ್ಕ ಹಾಕಿದ್ದಾರೆ. 5. ಪಪ್ಪು ಕುಮಾರ್ : ಅಪಘಾತದಲ್ಲಿ ಕಾಲು ಕಳೆದುಕೊಂಡ ಬಳಿಕ ಪಾಟ್ನಾದ ರೈಲು ನಿಲ್ದಾಣದಲ್ಲಿ ಪಪ್ಪು ಕುಮಾರ್ ಭಿಕ್ಷಾಟನೆ ಆರಂಭಿಸಿದ್ರು. ಕುಮಾರ್ ಬರೋಬ್ಬರಿ 1.25 ಕೋಟಿ ರೂಪಾಯಿ ಹೊಂದಿದ್ದಾರೆ.