ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದ್ದು, ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಈ ನಡುವೆ ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಾಟ್ಚಿ ಸಂಸ್ಥಾಪಕ ನಟ ಶರತ್ ಕುಮಾರ್ ಮಕ್ಕಳ್ ನೀದಿ ಮೈಯಂ ಪಕ್ಷದ ಮುಖ್ಯಸ್ಥ ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ.
ಭೇಟಿ ವೇಳೆ ಕಮಲ್ ಪಕ್ಷದ ಜೊತೆ ಮೈತ್ರಿ ಬಗ್ಗೆ ಶರತ್ ಚರ್ಚೆ ನಡೆಸಿದ್ದಾರೆ. ಕಮಲ್ ಹಾಸನ್ ಅವರ ಜೊತೆ ಮಾತುಕತೆ ನಡೆದಿದ್ದು, ಉತ್ತಮ ವ್ಯಕ್ತಿಗಳ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಚುನಾವಣೆ ಬಗ್ಗೆ ಅವರೇ ನಿರ್ಧಾರ ಮಾಡಲಿದ್ದಾರೆ ಎಂದು ಶರತ್ ಕುಮಾತ್ ತಿಳಿಸಿದ್ದಾರೆ.
ನಮ್ಮ ಪಕ್ಷ ಜನರ ಒಳಿತಿಗಾಗಿ ದುಡಿಯಲಿದೆ. ಚುನಾವಣೆ ಬಳಿಕವೇ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ತಿಳಿಯಲಿದೆ ಎಂದಿರುವ ಅವರು, ಹಣದ ಆಸೆಗಾಗಿ ಯಾರೂ ಮತ ಚಲಾಯಿಸಬಾರದು ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.