ವೈದ್ಯ ಲೋಕದಲ್ಲಿ ಸೇವೆ ಸಲ್ಲಿಸೋದು ಅಂದರೆ ಸುಲಭದ ಮಾತಂತೂ ಅಲ್ಲ. ರೋಗಿಗಳ ಜೀವವನ್ನ ಕಾಪಾಡೋಕೆ ಹಗಲು ರಾತ್ರಿ ಶ್ರಮ ವಹಿಸ್ತಾರೆ. ಈ ಕಷ್ಟದ ನಡುವೆಯೂ ಮಂಗಳೂರಿನ ಮಹಿಳಾ ವೈದ್ಯರ ತಂಡವೊಂದು ನೈಟ್ ಶಿಫ್ಟ್ ಮುಗಿಸಿಕೊಂಡು ಹಾಡೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನ ಹಿರಿಯ ವೈದ್ಯೆ ಡಾ. ನೀಲಾಷ್ಮಾ ಸಿಂಘೆಲ್ ಎಂಬವರು ಶೇರ್ ಮಾಡಿದ್ದಾರೆ. ಎಲ್ಲಾ ವೈದ್ಯರು ಬಣ್ಣ ಬಣ್ಣದ ಸ್ಕ್ರಬ್ಸ್ ಧರಿಸಿ ಸ್ಟೆತೊಸ್ಕೋಪ್ನ್ನು ಕುತ್ತಿಗೆಗೆ ಹಾಕಿಕೊಂಡು ವೃತ್ತಾಕಾರದಲ್ಲಿ ನಿಂತು ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಈ ನೃತ್ಯದ ಮುಂದಾಳತ್ವ ವಹಿಸಿರುವ ಡಾ. ಸಿಂಘೆಲ್ ನೇರಳೆ ನೇರಳೆ ಬಣ್ಣದ ಸ್ಕ್ರಬ್ಸ್ ಧರಿಸಿದ್ದಾರೆ. ಇವರು ಎಲ್ಲರಿಗಿಂತ ಹಿರಿಯ ವೈದ್ಯೆಯಾಗಿದ್ದರೆ ಇವರ ಜೊತೆ ಇನ್ನಿಬ್ಬರು ಕಿರಿಯ ವೈದ್ಯರು ಹಾಗೂ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ಸಿಂಘೆಲ್, ನನ್ನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಮುದ್ದಾದ ಜ್ಯೂನಿಯರ್ಗಳು ಎಂದು ಶೀರ್ಷಿಕೆ ನೀಡಿದ್ದಾರೆ.
https://www.instagram.com/p/CLGMJSFjceU/?utm_source=ig_web_copy_link