ನವದೆಹಲಿ: ರಾಯಲ್ ಎನ್ಫೀಲ್ಡ್ ಬುಲೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಸುದ್ದಿ ಇಲ್ಲಿದೆ. ಬಿಎಸ್6 ಮಾದರಿಯ ಎನ್ಫೀಲ್ಡ್ ಬುಲೆಟ್ 350 ಬೈಕ್ ನ ಬೆಲೆಯನ್ನು ಹೆಚ್ಚಿಸಲಾಗಿದೆ.
ಬುಲೆಟ್ ಬೇಸಿಕ್ ಮಾದರಿಯ ಎಕ್ಸ್ ಶೋರೂಂ ಬೆಲೆ ಈಗ 1.30 ಲಕ್ಷಕ್ಕೆ ಏರಿಕೆಯಾಗಿದೆ. 350 ಸಿಸಿಯ ಎಲ್ಲ ಬುಲೆಟ್ ಗಳ ಬೆಲೆ ಕನಿಷ್ಠ 3500 ರೂ. ಏರಿಕೆಯಾಗಿದೆ.
ಬುಲೆಟ್ 350(ಸ್ಟ್ಯಾಂಡರ್ಡ್)- ಬೆಲೆ ₹1,30,228, ಆಗಿದೆ. ಹಿಂದಿನ ಬೆಲೆಗಿಂತ 3134 ₹ ಹೆಚ್ಚಳವಾಗಿದೆ. ಬುಲೆಟ್ 350 ಇಎಸ್ (ಇಲೆಕ್ಟ್ರಿಕ್ ಸ್ಟಾರ್ಟ್) ಬೆಲೆ ₹1,46,152 ಆಗಿದ್ದು, ಹಳೆಯ ಬೆಲೆಗಿಂತ ₹ 3447 ಹೆಚ್ಚಳವಾದಂತಾಗಿದೆ.
ನನಸಾಯ್ತು ಕನಸು..! ಅಂತರರಾಷ್ಟ್ರೀಯ ಅಥ್ಲೀಟ್ ಗೆ DSP ಹುದ್ದೆ
ಚೆನ್ನೈ ಮೂಲದ ರಾಯಲ್ ಎನ್ಫೀಲ್ಡ್ ಕಂಪನಿ 1932 ರಲ್ಲಿ ಬುಲೆಟ್-350 ಬೈಕ್ ಗಳನ್ನು ಪರಿಚಯಿಸಿತು. ವಿಶ್ವದಲ್ಲಿ ಅತಿ ಹೆಚ್ಚು ವರ್ಷ ಬಳಕೆಯಲ್ಲಿರುವ ಬೈಕ್ ನ ಮಾಡೆಲ್ ಇದಾಗಿದೆ. ಭಾರತದಲ್ಲಿ ಅತಿ ಪ್ರಸಿದ್ಧವಾದ ಹಾಗೂ ಇಲ್ಲಿನ ಜನ ಪ್ರೀತಿಯಿಂದ ಬಳಸಿದ ಬೈಕ್ ಇದಾಗಿದೆ.