ನವದೆಹಲಿ: ಭಾರತ ತಂಡದ ಮಾಜಿ ಆಲ್ ರೌಂಡರ್ ಯೂಸೂಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ಗಮನಸೆಳೆದಿದ್ದ ಯುಸೂಫ್ ಪಠಾಣ್ ನಿವೃತ್ತಿ ಘೋಷಿಸಿದ್ದು, ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ್ದು ನನಗೆ ನೆನಪಿದೆ. ನಾನು ಅಂದು ಜೆರ್ಸಿಯನ್ನು ಮಾತ್ರ ಧರಿಸಿರಲಿಲ್ಲ. ಬದಲಿಗೆ ನಮ್ಮ ಕುಟುಂಬ, ಕೋಚ್, ಮತ್ತು ಸ್ನೇಹಿತರು ಹಾಗೂ ದೇಶದ ನಿರೀಕ್ಷೆಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ, ದೇಶೀಯ ಹಾಗೂ ಐಪಿಎಲ್ ಟೂರ್ನಿ ಗಳಲ್ಲಿ ಕ್ರಿಕೆಟ್ ಆಡಿದ್ದೇನೆ. ಇವತ್ತು ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸುತ್ತಿದ್ದೇನೆ. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಯೂಸೂಫ್ ಪಠಾಣ್ ತಿಳಿಸಿದ್ದಾರೆ. 57 ಏಕದಿನ ಪಂದ್ಯ ಆಡಿರುವ ಅವರು 22 ಟಿ20, 174 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.