ಬೆಂಗಳೂರು: ಬಿಜೆಪಿ ಶಾಸಕರು ಹಾಗೂ ಸಚಿವರ ನಡುವೆ ಮತ್ತೆ ಶೀತಲ ಸಮರ ಆರಂಭವಾಗಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ್ ವಿರುದ್ಧ ಕಿಡಿಕಾರಿದ್ದು, ತಮ್ಮ ಫೋನ್ ಕರೆಯನ್ನು ಕೂಡ ಸ್ವೀಕರಿಸುತ್ತಿಲ್ಲ ಅವರೇನು ದೇವಲೋಕದಿಂದ ಬಂದಿದ್ದಾರೆಯೇ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಹೊನ್ನಾಳಿ ಕ್ಷೇತ್ರದ ಕೆಲಸಕ್ಕಾಗಿ ನಾನು ಸಚಿವ ಸುಧಾಕರ್ ಅವರಿಗೆ ಹಲವು ಬಾರಿ ಕರೆ ಮಾಡಿದೆ. ಆದರೆ ಫೋನ್ ಸ್ವೀಕರಿಸುತ್ತಿಲ್ಲ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಬೇಸರವಾಗಿದೆ. ಅವರ ಆಪ್ತ ಕಾರ್ಯದರ್ಶಿಗೂ ಕರೆ ಮಾಡಿ ಹೇಳಿದೆ. ಸುಧಾಕರ್ ಒಬ್ಬರಿಂದಲೇ ಸರ್ಕಾರ ರಚನೆಯಾಗಿದೆಯೇ? ಅವರೇನು ದೇವಲೋಕದಿಂದ ಇಳಿದು ಬಂದಿದ್ದಾರಾ? ಇಂತಹ ವರ್ತನೆ ಮುಂದುವರೆದರೆ ರೇಣುಕಾಚಾರ್ಯನ ಇನ್ನೊಂದು ಮುಖ ತೋರಿಸಬೇಕಾಗುತ್ತೆ ಎಂದು ಹೇಳುವಂತೆ ತಿಳಿಸಿದ್ದೇನೆ ಎಂದರು.
BIG NEWS: ಪಂಚರಾಜ್ಯಗಳ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್ – ರಾಜ್ಯದ ಉಪಚುನಾವಣೆಗೂ ದಿನಾಂಕ ನಿಗದಿ….?
ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಪಕ್ಷ ಸಂಘಟನೆಯನ್ನೂ ಮಾಡಿದ್ದೇನೆ. ಆದರೆ ಪಕ್ಷ ಸಂಘಟನೆ ವಿಚಾರದಲ್ಲಿ ಕೆಲವರ ಪಾತ್ರವೇನು? ಎಂದು ಪ್ರಶ್ನಿಸಿರುವ ರೇಣುಕಾಚಾರ್ಯ, 5-6 ಸಚಿವರು ಕೈಗೆ ಸಿಗುತ್ತಿಲ್ಲ. ನಮ್ಮಂತಹ ಶಾಸಕರಿಗೆ ಹೀಗಾದರೆ ಸಾಮಾನ್ಯರ ಸ್ಥಿತಿಯೇನು? ಕೆಲ ಸಚಿವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರಲ್ಲ ಎಂದು ಗುಡುಗಿದರು.