alex Certify BIG NEWS: ಪ್ರವಾಹದ ಮುನ್ಸೂಚನೆ ನೀಡುತ್ತೆ ವಿದ್ಯಾರ್ಥಿಗಳು ತಯಾರಿಸಿರುವ ಅಲಾರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರವಾಹದ ಮುನ್ಸೂಚನೆ ನೀಡುತ್ತೆ ವಿದ್ಯಾರ್ಥಿಗಳು ತಯಾರಿಸಿರುವ ಅಲಾರಂ

ಅಶೋಕ ಇನ್​ಸ್ಟಿಟ್ಯೂಟ್ ಆಫ್​​ ಟೆಕ್ನಾಲಜಿ ಹಾಗೂ ಮ್ಯಾನೇಜ್​ಮೆಂಟ್​ನ ಮೂವರು ವಿದ್ಯಾರ್ಥಿಗಳು ಪ್ರವಾಹದ ಮುನ್ನೆಚ್ಚರಿಕೆಯನ್ನ ನೀಡಬಲ್ಲ ಅಲಾರಂ ಒಂದನ್ನ ಕಂಡು ಹಿಡಿದಿದ್ದಾರೆ. ಈ ಅಲಾರಂನ ಸಹಾಯದಿಂದ ಜನತೆ ನೈಸರ್ಗಿಕ ವಿಪತ್ತಿನಿಂದ ಪಾರಾಗಬಹುದಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ವಿದ್ಯಾರ್ಥಿನಿ ಅನು ಸಿಂಗ್​, ಉತ್ತರಾಖಂಡ್​ ದುರಂತದಲ್ಲಿ ಸಾಕಷ್ಟು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ಈ ಅಲಾರಂ ಸೆನ್ಸರ್​ನ್ನು ಕಂಡುಹಿಡಿದಿದ್ದು, ಇದರ ಸಹಾಯದಿಂದಾಗಿ ಜನತೆಗೆ ಬೇಗನೇ ಅಲರ್ಟ್ ಆಗಬಹುದಾಗಿದೆ.

ಈ ಅಲಾರಂಗಳನ್ನ ಡ್ಯಾಂ ಇಲ್ಲವೇ ದುರಂತ ನಡೆಯುವ ಸಾಧ್ಯತೆ ಇರುವ ಸ್ಥಳಗಳ ಬಳಿ ಫಿಕ್ಸ್ ಮಾಡಬೇಕು. ಈ ಅಲಾರಂ 500 ಮೀಟರ್​ ದೂರದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುವ ಮುನ್ಸೂಚನೆಯನ್ನು ನೀಡಲಿದೆ. ಈ ಸೆನ್ಸಾರ್​​ನ ಕಾರ್ಯಕ್ಷಮತೆಯನ್ನ ಇನ್ನಷ್ಟು ಹೆಚ್ಚಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದೊಂದು ಚಾರ್ಜ್​ ಮಾಡಬಲ್ಲ ಸೆನ್ಸಾರ್​ ಆಗಿದ್ದು ಒಮ್ಮೆ ಚಾರ್ಜ್ ಮಾಡಿದ್ರೆ 6 ತಿಂಗಳುಗಳ ಕಾಲ ಕಾರ್ಯನಿರ್ವಹಿಸಲಿದೆ. ಒಂದು ಸೆನ್ಸಾರ್​ ನಿರ್ಮಾಣ ಮಾಡಲು 7000 – 8000 ರೂಪಾಯಿ ವೆಚ್ಚ ತಗಲುತ್ತದೆ ಎಂದೂ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...