ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಂಕ್ಚರ್ ಆದ ಕಾರಿನ ಟೈಯರ್ ತೆಗೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.
ಕುಟುಂಬದವರೊಂದಿಗೆ ರೋಹಿಣಿ ಸಿಂಧೂರಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟಯರ್ ಪಂಕ್ಚರ್ ಆಗಿದೆ. ಆಗ ಅವರೇ ಟೈಯರ್ ತೆಗೆದಿದ್ದಾರೆ. ಜಾಕ್ ಏರಿಸಿ ಟೈಯರ್ ತೆಗೆದು ಹಾಕಿದ್ದು, ಇದನ್ನು ಗಮನಿಸಿದವರು, ನೀವು ಡಿಸಿ ರೋಹಿಣಿ ಸಿಂಧೂರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಕ್ಕು ಸುಮ್ಮನಾದ ರೋಹಿಣಿ ಸಿಂಧೂರಿ ಅವರು ತಮ್ಮ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಡಿಸಿಯವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.