ಬಾಲಿವುಡ್‌ನಲ್ಲಿ ಹೊಸಬರು ಮುಂದೆ ಬರುವುದು ಬಲು ಕಷ್ಟ ಹಾಗೂ ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಬೇಕು ಎಂಬುದು ಉದ್ಯಮದ ಒಳಗಿನಿಂದ ಬರುತ್ತಲೇ ಇರುವ ಸಾಮಾನ್ಯ ಮಾತಾಗಿದೆ.
ಪ್ರಸಕ್ತ ದೇಶದ ಲೀಡಿಂಗ್ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ನೋರಾ ಫತೇಹಿ ತಮ್ಮ ದಿಲ್‌ಬರ್, ಗರ್ಮಿ ಸೇರಿದಂತೆ ಅನೇಕ ನಂಬರ್‌ಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಭಾರತ-ಮೊರಕ್ಕೋ-ಕೆನಡಾ ಮೂಲದ ಈಕೆಯ ಬಾಲಿವುಡ್ ಪಯಣ ಹೂವಿನ ಹಾಸಿಗೆ ಆಗಿರಲಿಲ್ಲ.
“ಒಳಗಿನ ಹೂರಣ ತಿಳಿದಿರದ ನಮಗೆ ಬಹಳ ಖುಷಿಯಾಗಿತ್ತು. ನಾನು ಭಾರತಕ್ಕೆ ತಲುಪಿದ ಬಳಿಕ ನಾನು ಅಂದುಕೊಂಡಂತೆ ಏನೂ ಇರಲಿಲ್ಲ. ಐಷಾರಾಮಿ ಕಾರಿನಲ್ಲಿ ನನ್ನನ್ನು ಪಿಕ್ಅಪ್ ಮಾಡಿ, ಜೊತೆಗೊಬ್ಬ ಬಾಣಸಿಗನನ್ನು ಕಳುಹಿಸಲಾಗುತ್ತದೆ, ನನ್ನನ್ನು ಸೂಟ್‌ಗೆ ಕರೆದೊಯ್ಯುತ್ತಾರೆ, ಆ ಕಾರಿನಲ್ಲಿ ಆಡಿಷನ್‌ಗೆಲ್ಲಾ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ಹಾಗೆಲ್ಲಾ ಏನೂ ಇರಲಿಲ್ಲ. ನನ್ನ ಮುಖದ ಮೇಲೆ ದೊಡ್ಡ ಹೊಡೆತ ಬಿದ್ದಂತಾಯ್ತು. ಹೀಯಾಳಿಕೆ, ನಿರಾಕರಣೆ, ನೋವಿನ ಅನುಭವಗಳನ್ನೆಲ್ಲಾ ನಾನು ಎದುರಿಸಿದೆ” ಎಂದು ಫತೇಹಿ ಹೇಳಿಕೊಂಡಿದ್ದಾರೆ.
ಕುತೂಹಲಕ್ಕೆ ಕಾರಣವಾಯ್ತು ಶಾಸಕ ಜಮೀರ್ ಮನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ
“ನೀನು ಇಂಥದ್ದೆಲ್ಲವನ್ನೂ ಎದುರಿಸಲಿರುವೆ ಎಂದು ಯಾರಾದರೂ ನನಗೆ ಹೇಳಿದ್ದರೆ — ’ನೀನು ದುಷ್ಟರನ್ನು ಭೇಟಿಯಾಗಲಿರುವೆ, ಅವರು ನಿನ್ನ ಪಾಸ್‌ಪೋರ್ಟ್ ಕಸಿಯಲಿದ್ದಾರೆ, ನಿನ್ನನ್ನು ಗಡೀಪಾರು ಮಾಡಲಿದ್ದಾರೆ, ನೀನು ಕೆನಡಾಗೆ ಮರಳಿ ಹೋಗಲಿದ್ದೀಯೆ ಹಾಗೂ ಜನರು ನಿನ್ನ ನೋಡಿ ನಗಲಿದ್ದಾರೆ. ಅಭಿವೃದ್ಧಿ ಹೊಂದಿದ ದೇಶದಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಹೇಗೆ ಹೋಗುವೆ? ನೀನು ಭಾರತಕ್ಕೆ ಮರಳಿ ಹೋಗುತ್ತಿರುವೆ, ನೀನು ಹೋರಾಡಲು ಹೋಗುತ್ತಿರುವೆ, ಭಾಷೆ ಕಲಿ, ದಾರಿಯಲ್ಲಿ ನಿನ್ನ ನೋಡಿ ನಗುವ ಜನರನ್ನು ಭೇಟಿ ಮಾಡಲು ಹೋಗುತ್ತಿರುವೆ, ಅವರು ನಿನ್ನ ನೋಡಿ ನಗಲಿದ್ದಾರೆ’ ಎಂದೆಲ್ಲಾ ಕೇಳಿದ್ದೇನೆ ಎಂದು ಫತೇಹಿ ಹೇಳಿಕೊಂಡಿದ್ದು, ತಮ್ಮ ಬದಲಿಗೆ ಮತ್ಯಾರಾದರೂ ಇಷ್ಟೆಲ್ಲಾ ಅನುಭವಿಸಿದ್ದಲ್ಲಿ ಅವರು ಹಿಡಿದ ದಾರಿಯನ್ನು ಆರಂಭದಲ್ಲೇ ಬಿಟ್ಟು ಬಿಡುತ್ತಿದ್ದರು ಎಂದಿದ್ದಾರೆ.