ಆನ್ಲೈನ್ ಫುಡ್ ಆರ್ಡರ್ ಮಾಡೋದು ಎಷ್ಟು ಸುಲಭದ ಕೆಲಸಾನೋ ಡೆಲಿವರಿ ಬಾಯ್ಗೆ ವಿಳಾಸವನ್ನ ತಿಳಿಸಿಹೇಳೋದು ಅಷ್ಟೇ ಕಷ್ಟದ ಕೆಲಸ. ನಮ್ಮ ನೆಚ್ಚಿನ ರೆಸ್ಟಾರೆಂಟ್ನಿಂದ ಆಹಾರ ಬರ್ತಿದೆ ಅನ್ನೋ ಖುಷಿ ಒಂದೆಡೆಯಾದರೆ ಅದು ನಮ್ಮ ಕೈಗೆ ಬಂದು ಮುಟ್ಟುವ ತನಕ ಸಮಾಧಾನ ಮಾತ್ರ ಇರೋದಿಲ್ಲ.
ಆದರೆ ಓರ್ವ ಟ್ವಿಟರ್ ಬಳಕೆದಾರ ಮಾತ್ರ ಈ ಕಷ್ಟದ ಕೆಲಸಕ್ಕೆ ತುಂಬಾ ಸರಳವಾದ ಪರಿಹಾರವೊಂದನ್ನ ಕಂಡು ಹಿಡಿದಿದ್ದಾರೆ. ಅಲ್ಲದೇ ಈ ಪ್ಲಾನ್ ಇದೀಗ ಸಖತ್ ವೈರಲ್ ಕೂಡ ಆಗಿದೆ. ಟ್ವಿಟರ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಬಳಕೆದಾರ ಊಬರ್ ಈಟ್ಸ್ ಅವರಿಗೆ ನಮ್ಮ ಮನೆಯನ್ನ ಹುಡುಕಲು ಸಾಧ್ಯವಾಗದಕ್ಕೆ ಹೀಗೆ ಮಾಡಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಫುಡ್ ಆರ್ಡರ್ ಮಾಡಿದ್ದ ವ್ಯಕ್ತಿ ತನ್ನ ಮನೆಯಲ್ಲಿ ನಿಂತು ಡೆಲಿವರಿ ಬಾಯ್ಗೆ ಟಾರ್ಚ್ ಲೈಟ್ನ್ನು ಫ್ಲ್ಯಾಶ್ ಮಾಡಿದ್ದಾರೆ. ನೆಟ್ಟಿಗರು ಈ ಐಡಿಯಾವನ್ನ ಮೆಚ್ಚಿಕೊಂಡಿದ್ದಾರೆ.
https://twitter.com/spxc_ii/status/1363896724469805061