alex Certify ‘ಪಾವ್ರಿ’ ಟ್ರೆಂಡ್​ ಮೂಲಕ ವೈದ್ಯರಿಂದ ಸುರಕ್ಷತೆಯ ಪಾಠ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಾವ್ರಿ’ ಟ್ರೆಂಡ್​ ಮೂಲಕ ವೈದ್ಯರಿಂದ ಸುರಕ್ಷತೆಯ ಪಾಠ

ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಪಾವ್ರಿ ಎಂಬ ಶಬ್ದ ಭಾರೀ ಟ್ರೆಂಡ್​ನಲ್ಲಿದೆ. ಈ ವಿಡಿಯೋ ಸಾಲಿಗೆ ಇದೀಗ ಮಣಿಪಾಲ್​ ಆಸ್ಪತ್ರೆಯ ವೈದ್ಯರು ಸೇರಿಕೊಂಡಿದ್ದಾರೆ. ಆದರೆ ಈ ತಮಾಷೆಯ ವಿಡಿಯೋದಲ್ಲೂ ವೈದ್ಯರು ಜನರಿಗೆ ಉತ್ತಮ ಮೆಸೇಜ್​ ನೀಡಿದ್ದಾರೆ.

ಪಿಪಿಇ ಕಿಟ್​ ಧರಿಸಿದ ವೈದ್ಯರ ತಂಡದ ಓರ್ವ ಸದಸ್ಯೆ ಲಾಪ್​ಟಾಪ್​ ಪರದೆಯ ಮೇಲೆ ಕೊರೊನಾ ವೈರಸ್​​ ಚಿತ್ರವನ್ನ ಹಾಕಿದ್ದಾರೆ. ‘ಯೇ ಹಾಸ್ಪಿಟಲ್​ ಹೈ, ಯೇ ಕೊರೊನಾ ವೈರಸ್​ ಹೈ , ಔರ್​ ಆಪ್​ ಕೋ ಪಾವ್ರಿ ನಹಿ ನಹಿ ನಹಿ ಕರನಿ ಚಾಹಿಯೆ’(ಇದು ಹಾಸ್ಪಿಟಲ್​, ಇದು ಕೊರೊನಾ ವೈರಸ್​ ಹಾಗೂ ನೀವು ಯಾವುದೇ ಕಾರಣಕ್ಕೂ ಪಾರ್ಟಿ ಮಾಡಲೇಬೇಡಿ) ಎಂದು ವೈದ್ಯರು ಹೇಳಿದ್ದಾರೆ.

ಸಾಂಕ್ರಾಮಿಕ ಇನ್ನೂ ಕೊನೆಯಾಗಿಲ್ಲ ಹೀಗಾಗಿ ಪಾರ್ಟಿ ಮಾಡಲು ಸಮಯವಿಲ್ಲ. ಮಾಸ್ಕ್​ ಹಾಕಿಕೊಳ್ಳಿ. ಸೇಫ್​ ಆಗಿರಿ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಈ ಪಾವ್ರಿ ಎಂಬ ಟ್ರೆಂಡ್​ ವಾರಗಳ ಹಿಂದೆ ಧನನೀರ್ ಮೊಬೀನ್​​ ಎಂಬವರು ಪೋಸ್ಟ್ ಮಾಡಿದ ವೈರಲ್​ ಆದ ಬಳಿಕ ಶುರುವಾಗಿದೆ. ಇದರಲ್ಲಿ ಮೊಬೀನ್​, ಯೆ ಹಮಾರಿ ಕಾರ್​ ಹೈ, ಔರ್​ ಯೆ ಹಮ್​ ಹೈ,ಔರ್​ ಹಮಾರಿ ಪಾವ್ರಿ ಹೋ ರಹಿ ಹೈ ( ಇದು ನಮ್ಮ ಕಾರು, ಇದು ನಾವು ಹಾಗೂ ಇಲ್ಲಿ ನಮ್ಮ ಪಾರ್ಟಿ ನಡೆಯುತ್ತಿದೆ ) ಎಂದು ಹೇಳಿದ್ದರು. ಪಾರ್ಟಿ ಎಂಬ ಶಬ್ದವನ್ನ ಪಾವ್ರಿ ಎಂದು ಉಚ್ಚರಿಸಿದ್ದರಿಂದ ಈ ವಿಡಿಯೋ ಸಖತ್​ ಸದ್ದು ಮಾಡಿತ್ತು.

https://www.facebook.com/ManipalHospitalsIndia/videos/204689864731657/?t=8

https://www.instagram.com/p/CK9JmaXBEtc/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...