
ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ನಿಂದಾಗಿ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಅದರಲ್ಲೂ ಕೆಲವೊಮ್ಮೆ ಬಾಯಿಯ ಸುತ್ತಲೂ ಮೊಡವೆಗಳು ಮೂಡುತ್ತವೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಅಂತಹ ಸಮಯದಲ್ಲಿ ಈ ಟಿಪ್ಸ್ ಫಾಲೋ ಮಾಡಿ ಮೊಡವೆಯನ್ನು ಬೇಗನೆ ನಿವಾರಿಸಿಕೊಳ್ಳಿ.
*ನಿಮ್ಮ ಬಾಯಿ ಬಳಿ ಮೊಡವೆ ಮೂಡಿದಾಗ ಅದನ್ನು ಪದೇ ಪದೇ ಮುಟ್ಟಲು ಹೋಗಬೇಡಿ. ಇದರಿಂದ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ರಂಧ್ರ ಮೂಡಬಹುದು.
*ರಾತ್ರಿ ನಿದ್ರೆ ಮಾಡುವ ವೇಳೆ ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳಬೇಡಿ. ಇದರಿಂದ ಜಿಡ್ಡಿನ ಅಂಶ ಮೊಡವೆಗೆ ತಗುಲಿ ಅದು ಮತ್ತಷ್ಟು ಹೆಚ್ಚಾಗುತ್ತದೆ.
ತುಟಿಗಳ ʼಕಾಂತಿʼ ಹೆಚ್ಚಿಸಲು ಮನೆಯಲ್ಲೇ ನೈಸರ್ಗಿಕ ಪ್ಯಾಕ್
*ನಿಮ್ಮ ಮುಖದಲ್ಲಿ ಮೊಡವೆಗಳಿದ್ದಾಗ ಮೇಕಪ್ ಬಳಸಬೇಡಿ. ಇದರಿಂದ ಮೊಡವೆ ಮತ್ತಷ್ಟು ಹೆಚ್ಚಾಗುತ್ತದೆ.
*ಆಹಾರ ಸೇವಿಸಿದ ನಂತರ ಬಾಯಿ ಹಾಗೂ ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಿ. ಹಾಗೇ ಜಂಕ್ ಫುಡ್ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ.