ಚಲಿಸುವ ರೈಲುಗಳಿಗೆ ಹತ್ತುವ ಯತ್ನ ಮಾಡಬೇಡಿ ಎಂದು ಅದೆಷ್ಟೇ ವಿನಂತಿಸಿಕೊಂಡರೂ ಸಹ ಆತುರದಲ್ಲಿ ಓಡುತ್ತಿರುವ ರೈಲುಗಳನ್ನೇರಲು ಮುಂದಾಗುವ ಮಂದಿಗೇನೂ ಕಮ್ಮಿ ಇಲ್ಲ.
ಲಖನೌ ರೈಲ್ವೇ ನಿಲ್ದಾಣದಲ್ಲಿ ಹೀಗೇ ಚಲಿಸುತ್ತಿದ್ದ ರೈಲೊಂದಕ್ಕೆ ಹತ್ತಿಕೊಳ್ಳಲು ಓಡಿ ಹೋಗುತ್ತಿದ್ದ ಹುಡುಗಿಯೊಬ್ಬಳು ಆಯತಪ್ಪಿ ಪ್ಲಾಟ್ಫಾರಂ ಹಾಗೂ ರೈಲಿನ ನಡುವೆ ಸಿಲುಕುವ ಅಪಾಯದಲ್ಲಿದ್ದ ವೇಳೆ ಸಮಯ ಪ್ರಜ್ಞೆ ಮೆರೆದ ಆರ್ಪಿಎಫ್ ಪೊಲೀಸ್ ಪೇದೆಯೊಬ್ಬರು ಅವರ ಪ್ರಾಣ ರಕ್ಷಿಸಿದ್ದಾರೆ.
ಕಚೇರಿಯಲ್ಲಿಯೇ ತಹಶೀಲ್ದಾರ್ ಗೆ ಬೆಂಕಿ ಹಚ್ಚಿ ಕೊಲ್ಲಲು ಮುಂದಾದ ತಂದೆ – ಮಗ
ಫೆಬ್ರವರಿ 23ರಂದು ನಡೆದ ಈ ಘಟನೆಯಲ್ಲಿ, ಮಹಿಳಾ ಪೇದೆ ವನಿತಾ ಕುಮಾರಿ, ರೈಲಿನ ಬಾಗಿಲಿನಿಂದ ಜಾರಿ ಬಿದ್ದ ಯುವತಿಯನ್ನು ಸುರಕ್ಷಿತದೆಡೆಗೆ ಎಳೆದು ತರುವ ಮೂಲಕ ಆಕೆಗೆ ಮರುಜನ್ಮ ಕೊಟ್ಟಿದ್ದಾರೆ.
ಘಟನೆಯ ಸಿಸಿಟಿವಿ ವಿಡಿಯೋವನ್ನು ರೈಲ್ವೇ ಸಚಿವಾಲಯ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/VIJAYPA92408843/status/1364240580750888960?ref_src=twsrc%5Etfw%7Ctwcamp%5Etweetembed%7Ctwterm%5E1364240580750888960%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwoman-constable-lucknow-passenger-tries-to-board-moving-train-7202354%2F