
ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ ದಿನೇ ದಿನೇ ರಾಜಕೀಯ ಕೆಸರೆರಚಾಟ ಜೋರಾಗುತ್ತಿದ್ದು, ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಾಯಕರ ನಡುವೆ ತುರುಸಿನ ವಾಕ್ಸಮರ ಜೋರಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿ ಕಾರಿರುವ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಅಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಪಾದನೆ ಮಾಡಿದ್ದಾರೆ.
ಹೂಗ್ಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಬ್ಯಾನರ್ಜಿ, “ನರೇಂದ್ರ ಮೋದಿ ದೇಶ ಕಂಡ ಅತಿ ದೊಡ್ಡ ದಂಗೆಕೋರ. ಟ್ರಂಪ್ಗೆ ಆದದ್ದಕ್ಕಿಂತ ಹೀನಾಯ ಸ್ಥಿತಿ ಮೋದಿಗೆ ಬರಲಿದೆ. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ..?
“ಒಬ್ಬರು ದಾನವನಾದರೆ ಮತ್ತೊಬ್ಬ ರಾವಣ. ಇಬ್ಬರೂ ದೇಶವನ್ನು ನಡೆಸುತ್ತಿದ್ದಾರೆ. ಮೋದಿ ಮತ್ತು ನಿಮ್ಮ ದೈತ್ಯ ಮಿತ್ರ ಇಬ್ಬರೂ ಇನ್ನೆರಡು ತಿಂಗಳು ಮಾತನಾಡಿ ಆಮೇಲೆ ನಾವು ಮಾತನಾಡುತ್ತೇವೆ. ಬಂಗಾಳದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಈ ಕದನದಲ್ಲಿ ಬಿಜೆಪಿಗೆ ಸಮಾಧಿ ತೋಡುವುದನ್ನು ಖಾತ್ರಿ ಪಡಿಸುತ್ತೇವೆ” ಎಂದಿದ್ದಾರೆ ಮಮತಾ.
“ನಾನು ಪ್ರಧಾನಿ ಹುದ್ದೆಯನ್ನು ಗೌರವಿಸುತ್ತೇನೆ. ಇವತ್ತು ಅವರು ಇಲ್ಲಿದ್ದಾರೆ. ನಾಳೆ ಇರುವುದಿಲ್ಲ. ಆದರೆ ಅವರು ಸುಳ್ಳು ಹೇಳುತ್ತಾರೆ. ನಾನು ಬಂಗಾಳದ ಗೋಲ್ ಕೀಪರ್ ಆಗಿ ಕೆಲಸ ಮಾಡುತ್ತೇನೆ, ಬಿಜೆಪಿ ಒಂದೇ ಒಂದು ಗೋಲ್ ಹೊಡೆಯಲು ಆಗದು” ಎಂದ ದೀದಿ, “ಟೆಲಿಪ್ರಾಂಪ್ಟರ್ ಬಳಸಿ ಮೋದಿ ಅವರು ಬಂಗಾಳಿಯಲ್ಲಿ ಮಾತನಾಡುತ್ತಾರೆ. ನಾನು ಅದಿಲ್ಲದೇ ಮಾತನಾಡುತ್ತೇನೆ. ನನಗೆ ಟೆಲಿಪ್ರಾಂಪ್ಟರ್ ಇಲ್ಲದೇ ಗುಜರಾತಿಯಲ್ಲಿ ಮಾತನಾಡಲು ಬರುತ್ತದೆ” ಎಂದಿದ್ದಾರೆ.