alex Certify ರಾಜ್ಯಕ್ಕೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಗೆ ಆಧಾರ್ ಜೋಡಣೆಯಲ್ಲಿ ಕೇಂದ್ರದ ಪುರಸ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಗೆ ಆಧಾರ್ ಜೋಡಣೆಯಲ್ಲಿ ಕೇಂದ್ರದ ಪುರಸ್ಕಾರ

ಬೆಂಗಳೂರು: ಪಿಎಂ ಕಿಸಾನ್ ಯೋಜನೆಯಡಿ 97% ಆಧಾರ್ ಕಾರ್ಡ್ ರೈತರ ಅಕೌಂಟಿಗೆ ಜೋಡಣೆಯಾಗಿದಕ್ಕೆ ಆಧಾರಿತ ಪಾವತಿಯಾಗಿದ್ದಕ್ಕೆ ಕರ್ನಾಟಕ ಮೊದಲ ಸ್ಥಾನ ಪಡೆದಿದೆ.

ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕ ಸ್ಥಾನ ಮೊದಲ ಸ್ಥಾನ ಪಡೆದಿದ್ದಕ್ಕಾಗಿ ಕೇಂದ್ರ ಸರ್ಕಾರ  ಕರ್ನಾಟಕದ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರನ್ನು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಿದರು.

ಇತ್ತೀಚೆಗೆ ಕರ್ನಾಟಕದಲ್ಲಿ ಮೊಬೈಲ್ ಬೆಳೆ ಸಮೀಕ್ಷೆ ಸಹ ಯಶಸ್ವಿಯಾಗಿದ್ದು, ಕೇಂದ್ರದಿಂದ ಮೆಚ್ಚುಗೆಯನ್ನು ಸಹ ಪಡೆದಿದೆ.ಅಲ್ಲದೇ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ.ಅಲ್ಲದೇ ಕೃಷಿಸಂಜೀವಿನಿ ಯೋಜನೆಯೂ ಶ್ಲಾಘನೆ ಪಡೆದಿದ್ದು, ಕರ್ನಾಟಕದ ಕೃಷಿ ಇಲಾಖೆಯಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ರೈತರಿಗೆ ಹೊಸಹೊಸ ಯೋಜನೆಗಳನ್ನು ಪರಿಚಯಿಸುತ್ತಿರುವುದಕ್ಕೆ ಬಿ.ಸಿ.ಪಾಟೀಲರನ್ನು ಕೇಂದ್ರ ಶ್ಲಾಘಿಸಿದೆ.

“ಪ್ರಧಾನ ಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರಾಜ್ಯವು ಅತಿ ಹೆಚ್ಚು ಶೇಕಡ ಪ್ರಮಾಣದಲ್ಲಿ  ಆಧಾರ ಜೋಡಣೆ ಆಧಾರಿತ ಮೂಲಕ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಅನುಷ್ಟಾನಗೊಳಿಸಿರುವುದಕ್ಕೆ ರಾಜ್ಯವು ಈ ಪ್ರಶಸ್ತಿಗೆ ಭಾಜನವಾಗಿದೆ.  ನವದೆಹಲಿಯ ‘ಪೂಸಾ’ದಲ್ಲಿ  ನಡೆದ ಪಿ.ಎಂ.ಕಿಸಾನ್ ಯೋಜನೆಯ 2ನೇ ವರ್ಷದ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್  ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಇಲಾಖಾ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಯೋಜನೆಯಡಿ ರಾಜ್ಯವು ಶೇ 97 ರಷ್ಟು ‘ಆಧಾರ’ ದೃಡೀಕರಿಸಿದ ದತ್ತಾಂಶವನ್ನು ಹೊಂದಿದ್ದು, ರಾಜ್ಯದ ಶೇ 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ‘ಆಧಾರ’ ಆಧಾರಿತ ನೇರ ನಗದು ವರ್ಗಾವಣೆ ವಿಧಾನದ ಮೂಲಕ ಈ ಯೋಜನೆಯಡಿ ಪ್ರಯೋಜನಗಳನ್ನು ನೀಡಲಾಗುತ್ತಿದೆ. ರಾಜ್ಯವು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುತ್ತಿರುವುದಕ್ಕೆ ಈ ಪ್ರಶಸ್ತಿ ಸಂದಿದೆ.

ಈ ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖತ್ರಿ, ಕೃಷಿ ಇಲಾಖೆಯ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷೀತ್, ಕೃಷಿ ಇಲಾಖೆಯ ನಿರ್ದೇಶಕ, ಬಿ.ವೈ.ಶ್ರೀನಿವಾಸ ಪಾಲ್ಗೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...