ಬಿಗ್ ಬಾಸ್ 14ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರಾಖಿ ಸಾವಂತ್ ಸಾಕಷ್ಟು ವಿವಾದಗಳ ಮೂಲಕವೇ ಸುದ್ದಿಯಾಗಿದ್ದರು. ಇದೀಗ ಬಿಗ್ಬಾಸ್ 14ನೇ ಆವೃತ್ತಿ ಪೂರ್ಣಗೊಂಡಿದ್ದು ರಾಖಿ ಸಾವಂತ್ ಬಿಗ್ಬಾಸ್ ಮನೆಯ ಅನುಭವವನ್ನ ಹಂಚಿಕೊಂಡಿದ್ದಾರೆ.
ನನ್ನ ಬಿಗ್ ಬಾಸ್ ಜರ್ನಿ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ. ನನಗೆ ಯಾವುದರ ಮೇಲೆಯೂ ಪಶ್ಚಾತಾಪ ಇಲ್ಲ . ನಾನು ಬಿಗ್ ಬಾಸ್ ಮನೆಯಲ್ಲಿ ಕೊನೆಯವರೆಗೆ ಇರದೇ 14 ಲಕ್ಷ ರೂಪಾಯಿಯೊಂದಿಗೆ ವಾಪಸ್ಸಾಗಿದ್ದಕ್ಕೂ ನಾನು ಪಶ್ಚಾತಾಪ ಪಡಲಾರೆ. ನನಗೆ ಅನೇಕರು ನೀವು ಕೊನೆಯವರೆಗೆ ಇರಬೇಕಿತ್ತು ಎಂದು ಹೇಳ್ತಿದ್ದಾರೆ. ಬಹುಶಃ ನೀವೇ ಬಿಗ್ಬಾಸ್ ವಿಜೇತ ಪಟ್ಟ ಅಲಂಕರಿಸುತ್ತಿದ್ರಿ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ನನಗೆ ಚಾನ್ಸ್ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ. ನನ್ನ ತಾಯಿಗೆ ಸರ್ಜರಿ ಮಾಡಿಸಬೇಕಿತ್ತು. ಹೀಗಾಗಿ ನಾನು ಟ್ರೋಫಿಗಿಂತ ಹಣ ಮುಖ್ಯ ಎಂದು ಈ ನಿರ್ಧಾರ ಕೈಗೊಂಡೆ ಎಂದು ಹೇಳಿದ್ದಾರೆ.