ಅರಿಜೊನಾ: ಕೆಲಸದಿಂದ ತಪ್ಪಿಸಿಕೊಳ್ಳಲು ಸುಳ್ಳು ಸುಳ್ಳೆ ಕಿಡ್ನಾಪಿಂಗ್ ನಾಟಕವಾಡಲು ಹೋದ ವ್ಯಕ್ತಿಯೊಬ್ಬ ಕೆಲಸವನ್ನೇ ಕಳೆದುಕೊಂಡ ವಿಚಿತ್ರ ಘಟನೆ ಅಮೆರಿಕಾದ ಅರಿಜೊನಾದಲ್ಲಿ ನಡೆದಿದೆ.
ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಡಮ್ ಸೋಲ್ಸ್ ಎಂಬ 19 ವರ್ಷದ ಉದ್ಯೋಗಿಗೆ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವ ಮನಸ್ಸಾಯಿತು. ಆದರೆ, ಬಾಸ್ ಗೆ ಹೇಳಿದರೆ ರಜೆ ಕೊಡುವುದಿಲ್ಲ ಎಂದು ಒಂದು ಉಪಾಯ ಮಾಡಿದ್ದ. ಆದರೆ, ಅದೇ ತಿರುಗು ಬಾಣವಾಗಿದೆ.
ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಮಾದರಿ ಈ ಯಶಸ್ವಿ ʼಚಾಯ್ ವಾಲಾʼನ ಸ್ಟೋರಿ
ತಾನೇ ತನ್ನ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕೈಗೆ ಬೆಲ್ಟ್ ಕಟ್ಟಿಕೊಂಡು ರಸ್ತೆಯಲ್ಲಿ ಬಿದ್ದುಕೊಂಡಿದ್ದ. ಅದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನ್ನ ಅಪ್ಪನ ಬಳಿ ಇರುವ ನಿಧಿಗಾಗಿ ಯಾರೋ ಇಬ್ಬರು ತನ್ನನ್ನು ಕಿಡ್ನಾಪ್ ಮಾಡಿದರು ಎಂದು ಪೊಲೀಸರ ಬಳಿ ಸುಳ್ಳು ಹೇಳಿದ್ದ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಯಾವ ಆ್ಯಂಗಲ್ ನಲ್ಲಿ ತನಿಖೆ ಮಾಡಿದರೂ ಅವರಿಗೆ ಈತನ ಕಥೆ ಸರಿ ಹೊಂದುತ್ತಿರಲಿಲ್ಲ. ನಂತರ ಸೌಲ್ಸ್ ನಿಗೇ ನಾಲ್ಕು ತದಕಿ ವಿಚಾರ ಮಾಡಿದಾಗ ತಾನೇ ನಾಟಕವಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಆದರೆ ಪೊಲೀಸರೂ ಅತನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಆತನನ್ನು ಕೆಲಸದಿಂದಲೂ ತೆಗೆದು ಹಾಕಲಾಗಿದೆ.
https://www.facebook.com/CoolidgePolice/posts/2107732986030569