ಹಳೆಯ ಸ್ಟೈಲ್ ಗಳು ಕಾಲಕ್ರಮೇಣ ಮರೆಯಾಗುತ್ತವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ, ಕಾಲ ಚಕ್ರ ಒಂದು ಸುತ್ತು ಉರುಳಿದ ಬಳಿಕ ಮತ್ತೊಮ್ಮೆ ಕಾಣಿಸಿಕೊಳ್ಳುತ್ತವೆ ಎನ್ನುವುದು.
ಇತ್ತೀಚಿನ ದಿನಗಳಲ್ಲಿ ಮುಲ್ಲೆಟ್ ಕೇಶವಿನ್ಯಾಸ ಇದೇ ಥರ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಲೋಹ ಯುಗದ ಕಾಲದ 5 ಸೆಂ.ಮೀ. ಉದ್ದದ ಪ್ರತಿಮೆಯೊಂದರಲ್ಲೂ ಈ ಜನಪ್ರಿಯ ಹೇರ್ಸ್ಟೈಲ್ ಕಾಣಬಹುದಾಗಿದೆ.
ಅಜ್ಜಿಯ ಪ್ರೀತಿ ಶೇರ್ ಮಾಡಿಕೊಂಡ ಹವಾಮಾನ ವರದಿಗಾರ
ಬಿಲ್ಲಿ ರೇ ಸೈರಸ್ ಹಾಗೂ ಡೇವಿಡ್ ಬೋವಿರಂಥ ಸೂಪರ್ಸ್ಟಾರ್ಗಳಿಂದ ಜನಪ್ರಿಯವಾಗಿದ್ದರೂ ಈ ಮುಲ್ಲೆಟ್ ಕೇಶವಿನ್ಯಾಸವು ಶತಮಾನಗಳ ಹಿಂದೆಯೇ ಸಾಕಷ್ಟು ಸದ್ದು ಮಾಡುತ್ತಿತ್ತು. ರೋಮನ್ ಬ್ರಿಟನ್ ಯುಗದಲ್ಲೂ ಸಹ ಈ ಕಟ್ ಜನಪ್ರಿಯವಾಗಿತ್ತು ಎನ್ನಲಾಗುತ್ತಿದೆ.
ಆಕ್ಸ್ಫರ್ಡ್ ವಿವಿಯ ಪ್ರಾಚ್ಯವಸ್ತು ಇಲಾಖೆಯ ಸಿಬ್ಬಂದಿಯಿಂದ 2018ರಲ್ಲಿ ಕೇಂಬ್ರಿಡ್ಜ್ಶೈರ್ನಲ್ಲಿ ಶೋಧಿಸಲ್ಪಟ್ಟ, ಒಂದನೇ ಶತಮಾನಕ್ಕೆ ಸೇರಿದ ತಾಮ್ರದ ಮೂರ್ತಿಯೊಂದರಲ್ಲಿ ಕಂಡು ಬಂದ ಕೇಶವಿನ್ಯಾಸವನ್ನು ಪರಿಶೀಲಿಸಿದ ಬಳಿಕ ಬ್ರಿಟನ್ನ ರಾಷ್ಟ್ರೀಯ ಪ್ರತಿಷ್ಠಾನದ ಪ್ರಾಚ್ಯವಸ್ತು ತಜ್ಞರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.