ಬ್ರಿಟನ್ನ ಖ್ಯಾತ ಶೆಫ್ ಮಾರ್ಕೋ ಪಿಯೆರ್ರಿ ವೈಟ್ ಬಗ್ಗೆ ಹೆಚ್ಚಿನ ಪರಿಚಯ ಏನೂ ಬೇಕಿಲ್ಲ. ಹೆಲ್ಸ್ ಕಿಚನ್, ಮಾಸ್ಟರ್ ಶೆಫ್ ಆಸ್ಟ್ರೇಲಿಯಾದಂಥ ಶೋಗಳ ಮೂಲಕ ಜನಪ್ರಿಯರಾಗಿರುವ ವೈಟ್, ತಮಗೆ ಒಲಿದು ಬಂದ 3 ಮೈಕೆಲಿನ್ ಸ್ಟಾರ್ಗಳ ಗೌರವವನ್ನು ಬಿಟ್ಟುಕೊಟ್ಟು, ಜಗತ್ತನ್ನು ಸುತ್ತಲು ಹೊರಟಿದ್ದಾರೆ.
ತಲೆಮಾರುಗಳ ಮಟ್ಟಿಗೆ ಯುವ ಶೆಫ್ಗಳಿಗೆ ಸ್ಪೂರ್ತಿಯಾಗಿರುವ ವೈಟ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಫಾಲೋವಿಂಗ್ ಇದೆ.
ಮೊಟ್ಟೆ ಒಡೆಯುವುದು ಹೇಗೆ ಎಂದು ತೋರಿಸುವ ವಿಡಿಯೋವೊಂದನ್ನು ವೈಟ್ ಎರಡು ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಟೇಬಲ್ ಮೇಲೆ ಡಜನ್ ಮೊಟ್ಟೆಗಳನ್ನು ಇಟ್ಟುಕೊಂಡು ಕುಳಿತ ವೈಟ್, ಒಂದೊಂದೇ ಮೊಟ್ಟೆಯನ್ನು ತಾಳ್ಮೆಯಿಂದ ಒಡೆಯುತ್ತಿದ್ದು, ಮೊಟ್ಟೆ ಸಿಪ್ಪೆಗಳನ್ನೆಲ್ಲಾ ಒಂದರ ಮೇಲೆ ಸ್ಟಾಕ್ ಮಾಡಿ ಇಡುವುದನ್ನು ನೋಡಬಹುದಾಗಿದೆ.
2 ನಿಮಿಷ 30 ಸೆಕೆಂಡ್ಗಳಷ್ಟು ಉದ್ದವಿರುವ ಈ ವಿಡಿಯೋಗೆ 70 ಸಾವಿರಕ್ಕೂ ಹೆಚ್ಚು ವೀವ್ಸ್ ಸಿಕ್ಕಿದ್ದು, 7000 ಲೈಕ್ಗಳು ಹಾಗೂ 400 ಕಾಮೆಂಟುಗಳು ಬಂದಿವೆ.
https://www.instagram.com/tv/CLkBYwljW3P/?utm_source=ig_embed