ʼಬಿಗಿಲ್ʼ ಚಿತ್ರದ ವಿಲನ್ ಗೆ ಪೊಲೀಸ್ ಇಲಾಖೆಯಲ್ಲಿ ಬಡ್ತಿ 23-02-2021 11:51AM IST / No Comments / Posted In: Latest News, India, Live News ತಮಿಳು ನಟ ವಿಜಯ್ ಅಭಿನಯದ ’ಬಿಗಿಲ್’ ಚಿತ್ರದಲ್ಲಿ ನಟಿಸಿರುವ ಐ.ಎಂ. ವಿಜಯನ್ ಅನೇಕ ವರ್ಷಗಳ ಮಟ್ಟಿಗೆ ಕೇರಳ ಪೊಲೀಸ್ ತಂಡದ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಮ್ಮ ವಯಸ್ಸಿನ ದಿನಗಳಲ್ಲಿ ಭಾರತ ಫುಟ್ಬಾಲ್ ತಂಡದ ಜನಪ್ರಿಯ ಆಟಗಾರರಾಗಿದ್ದ ವಿಜಯನ್ ತಮಿಳಿನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ವಿಜಯನ್‌ಗೆ ಕೇರಳ ಪೊಲೀಸ್ ಇಲಾಖೆಯಲ್ಲಿ ಬಡ್ತಿ ಸಿಕ್ಕಿದ್ದು, ಅವರೀಗ ಸಹಾಯಕ ಕಮಾಂಡೆಂಟ್ ಹುದ್ದೆ ಅಲಂಕರಿಸಿದ್ದಾರೆ. ದೇಶದ ಮೊದಲ 4*4 ಮಡ್-ರೇಸ್ ಮೂವಿ ’ಮಡ್ಡಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯನ್. ಆಕ್ಷನ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ಕೆ.ಜಿಎಫ್‌ನ ರವಿ ಬಸ್ರೂರು ಸಂಗೀತ ಕೊಟ್ಟಿದ್ದು, ರತಾಸನ್ ಖ್ಯಾತಿಯ ಸ್ಯಾನ್ ಲೋಕೇಶ್ ಎಡಿಟಿಂಗ್ ಮಾಡಿದ್ದಾರೆ. I am glad to inform you all that I have been promoted as Assistant Commandant of Kerala Police. pic.twitter.com/aRN8ZsrtUB — I M Vijayan (@IMVijayan10) February 20, 2021