ನವದೆಹಲಿ: ದೇಶದಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯವನ್ನು ಒದಗಿಸಲಾಗಿದೆ. ನವಜಾತ ಶಿಶುವಿಗೆ ಆಧಾರ್ ಮಾಡಿಸಲು ಮುಖ್ಯವಾದ ಮಾಹಿತಿ ಇಲ್ಲಿದೆ.
ಯುಐಡಿಎಐ ಈ ಕುರಿತಾಗಿ ಮಾಹಿತಿ ನೀಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಆ ಮಗುವಿನ ತಂದೆ ಅಥವಾ ತಾಯಿಯಲ್ಲಿ ಒಬ್ಬರ(ಮಗುವಿನ ಬದಲು) ದೃಢೀಕರಣ ನೀಡಬೇಕಿದೆ. ಈ ಮಕ್ಕಳಿಗೆ ಬಯೋಮೆಟ್ರಿಕ್ ಇರುವುದಿಲ್ಲ. ಹೀಗಾಗಿ ಮಗುವಿನ ಪೋಷಕರಲ್ಲಿ ಒಬ್ಬರು ದಾಖಲಾತಿಯಲ್ಲಿ ಸಹಿ ಮಾಡಬೇಕಿದೆ.
ಪ್ರತಿಯೊಬ್ಬರೂ ಆಧಾರ್ ಗೆ ದಾಖಲಾಗಬೇಕು ಎಂದು ಯುಐಡಿಎಐ ಟ್ವೀಟ್ ಮಾಡಿದೆ. ನವಜಾತ ಶಿಶುವನ್ನು ಸಹ ಆಧಾರ್ ಗೆ ದಾಖಲಿಸಬಹುದು. ಜನನ ಪ್ರಮಾಣ ಪತ್ರದೊಂದಿಗೆ ಪೋಷಕರಲ್ಲಿ ಒಬ್ಬರ ಆಧಾರ್ ನೀಡಬೇಕು.
ಒಂದು ದಿನದಿಂದ ಐದು ವರ್ಷಗಳವರೆಗೆ ಮಗುವಿನ ಬಯೋಮೆಟ್ರಿಕ್ ಡೇಟಾವನ್ನು ಪಡೆಯುವುದಿಲ್ಲ. ಐದು ವರ್ಷಗಳಾದ ನಂತರ ಅದನ್ನು ನವೀಕರಿಸಬಹುದಾಗಿದೆ. ಒಂದು ದಿನದ ಮಗುವಿಗೆ ಆಧಾರ್ ಪಡೆಯಲು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಪೋಷಕರೊಬ್ಬರ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಸಹಾಯದಿಂದ ಸುಲಭವಾಗಿ ಮಗುವಿನ ಆಧಾರ್ ಕಾರ್ಡ್ ಮಾಡಿಸಬಹುದಾಗಿದೆ.
ನೋಂದಾಯಿಸುವುದು ಹೇಗೆ..?
ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಆಧಾರ್ ಕಾರ್ಡ್ ನೋಂದಣಿಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.
ಅಲ್ಲಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಮಗುವಿನ ಹೆಸರು, ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸವನ್ನು ಭರ್ತಿ ಮಾಡಿ.
ಇದರ ನಂತರ, ನೀವು ಆಧಾರ್ ಕಾರ್ಡ್ ಕೇಂದ್ರಕ್ಕೆ ಅಪಾಯಿಂಟ್ಮೆಂಟ್ ಪಡೆಯುತ್ತೀರಿ.
ಈಗ ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿಗದಿತ ದಿನ ಮತ್ತು ಸಮಯದ ಮೇಲೆ ಆಧಾರ್ ದಾಖಲಾತಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.