alex Certify ಅಭಿಮಾನಿ ಜೊತೆಗಿನ ಫೋಟೋ ಶೇರ್‌ ಮಾಡಿದ ಅರ್ಜುನ್‌ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿ ಜೊತೆಗಿನ ಫೋಟೋ ಶೇರ್‌ ಮಾಡಿದ ಅರ್ಜುನ್‌ ಕಪೂರ್

’ಭೂತ್‌ ಪೊಲೀಸ್’ ಚಿತ್ರದ ಚಿತ್ರೀಕರಣಕ್ಕೆಂದು ಜೈಸಲ್ಮೇರ್‌ನಲ್ಲಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಅಪ್ಪಟ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದಾಗ ತೆಗೆಸಿಕೊಂಡ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತಮ್ಮ ಅಭಿಮಾನಿಯೊಂದಿಗೆ ಥ್ರೋಬ್ಯಾಕ್ ಚಿತ್ರವನ್ನು ಶೇರ್‌ ಮಾಡಿಕೊಂಡ ಕಪೂರ್‌, “ಸ್ನೇಹಿತರು ಕುಟುಂಬದಂತೆ ಎನ್ನುತ್ತಾರೆ. ಆದರೆ ನಟನೊಬ್ಬನ ಜೀವನದಲ್ಲಿ ಅಭಿಮಾನಿಗಳು ಸಹ ಕುಟುಂಬವಿದ್ದಂತೆ. ಇಶಾಕ್‌ಜಾದೆ ಬಿಡುಗಡೆಯಿಂದಲೂ ನನ್ನ ದೊಡ್ಡ ಅಭಿಮಾನಿಯಾಗಿರುವ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ಸಮಯ ಸಿಕ್ಕಿ, ಶೂಟಿಂಗ್ ವೇಳೆ ಆತ ಹಾಗೂ ಆತನ ಸ್ನೇಹಿತನೊಂದಿಗೆ ಒಂದಷ್ಟು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು. ಆತ ನನ್ನನ್ನು ನೋಡಲು ಬಹಳ ದೂರದಿಂದ ಬಂದಿದ್ದಾನೆ ಎಂದು ತಿಳಿದು ಸಂತಸವಾಗಿದ್ದು ಇಂಥ ಘಳಿಗೆಗಳು ನನ್ನಲ್ಲಿ ಜೀವಮಾನದ ಮಟ್ಟಕ್ಕೆ ಸಕಾರಾತ್ಮಕತೆ ತುಂಬಲಿದ್ದು, ಅಭಿಮಾನಿಗಳಿಗಾಗಿ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ಕೊಡುತ್ತವೆ” ಎಂದು ಹೇಳಿಕೊಂಡಿದ್ದಾರೆ.

2 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ಕಣ್ಣು ಹೊಡಿಯಾಕ ಹಾಡು

ಕ್ಯಾನ್ಸರ್‌ ಪೀಡಿತ 100 ಜೋಡಿಗಳ ನೆರವಿಗೆ ಬಂದ ಕಪೂರ್‌, ಸದಾಚಾರಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿದ್ದಾರೆ.

https://www.instagram.com/p/CLl5BUfFhHR/?utm_source=ig_embed

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...