ತನ್ನ ಕೂದಲನ್ನೇ ತಿಂದು ಹಾಕಿದ್ದ ಬ್ರಿಟನ್ನ 17 ವರ್ಷದ ಟೀನೇಜರ್ ಒಬ್ಬಳ ಹೊಟ್ಟೆಯಲ್ಲಿ ದೊಡ್ಡದೊಂದು ಕೇಶದುಂಡೆ 48ಸೆಂಮೀನಷ್ಟು ದೊಡ್ಡದಾಗಿ ಬೆಳೆದು, ಆಕೆಯ ಹೊಟ್ಟೆಯನ್ನೇ ಸೀಳುವ ಮಟ್ಟಕ್ಕೆ ಬಂದಿತ್ತು. ಮೊಟ್ಟೆಯಾಕಾರದ ಕೇಶದುಂಡೆಯು ಆಕೆಯ ಹೊಟ್ಟೆಯನ್ನು ಸಂಪೂರ್ಣವಾಗಿ ತುಂಬಿಕೊಂಡಿತ್ತು.
ರಪುಂಜೆಲ್ ಸಿಂಡ್ರೋಮ್ ಎಂದು ಕರೆಯಲಾಗುವ ಈ ಅಪರೂಪದ ಪರಿಸ್ಥಿತಿಯಲ್ಲಿ ಕೂದಲು ಕರುಳಿಗೆ ಸೇರಿದಾಗ ಹೀಗೆ ಆಗುತ್ತದೆ. ಜಗತ್ತಿನ ಜನಸಂಖ್ಯೆಯ 0.5-3%ನಷ್ಟು ಜನ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಈ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ.
ಗಾಂಜಾ ಸಾಗಿಸುತ್ತಿದ್ದವರ ಮೇಲೆ ಫೈರಿಂಗ್: ಬರೋಬ್ಬರಿ 300 ಕೆಜಿ ಗಾಂಜಾ ವಶಕ್ಕೆ
ಕಳೆದ ಐದು ತಿಂಗಳಿನಿಂದ ಕೇಶದುಂಡೆಯು ಹೊಟ್ಟೆಯಲ್ಲಿ ತೀವ್ರವಾಗಿ ಬೆಳೆದ ಕಾರಣ ರೋಗಿಯ ಕಿಬ್ಬೊಟ್ಟೆಯಲ್ಲಿ ಬಹಳ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಏಳು ದಿನಗಳ ಬಳಿಕ ಈಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.