ನವದೆಹಲಿ: ಜನಸಾಮಾನ್ಯರು ತತ್ತರಿಸಿಹೋಗಿದ್ದು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಕೆ ಮಾಡಬೇಕು. ಈ ಮೂಲಕ ಪ್ರಧಾನಿ ಮೋದಿ ಅವರು ರಾಜಧರ್ಮ ಪಾಲಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಒತ್ತಾಯಿಸಿದ್ದಾರೆ.
ರಾಜಧರ್ಮ ಪಾಲಿಸುವ ಮೂಲಕ ಬೆಲೆ ಇಳಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ. ನಿರುದ್ಯೋಗದಿಂದ ಬಡ, ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಕೂಲಿ ಕಾರ್ಮಿಕರು, ರೈತರು ಮತ್ತು ಬಡವರಿಗೆ ನೆರವಾಗಬೇಕು. ಆರ್ಥಿಕ ಕುಸಿತದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸುದೀರ್ಘ ಮೂರು ಪುಟಗಳ ಪತ್ರ ಬರೆದಿರುವ ಸೋನಿಯಾಗಾಂಧಿ ಅವರು ಏರಿಕೆಯಾಗಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರವನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಅನಿಯಂತ್ರಿತವಾಗಿ ತೈಲ ದರ ದುಬಾರಿಯಾಗಿದೆ. ದೇಶದ ಜಿಡಿಪಿ ಪಾತಾಳಕ್ಕೆ ಕುಸಿಯುತ್ತಿದೆ. ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು ಇಂತಹ ಸಂದರ್ಭದಲ್ಲಿ ದರ ಇಳಿಸುವ ಮೂಲಕ ರಾಜಧರ್ಮ ಪಾಲಿಸಬೇಕೆಂದು ಆಗ್ರಹಿಸಿದ್ದಾರೆ.