ಟೆಕ್ಸಾಸ್: ಕೋಳಿಯನ್ನೊ, ಹಣ್ಣನ್ನೋ, ಸಾಗಿಸುವ ಲಾರಿ ರಸ್ತೆಯ ಮೇಲೆ ಮಗುಚಿ ಬಿದ್ದರೆ ಕೆಲವೇ ಕ್ಷಣದಲ್ಲಿ ನನಗೊಂದು ನಮ್ಮಪ್ಪನಿಗೊಂದು ಎಂದು ಜನ ಅವುಗಳನ್ನು ಹೊತ್ತೊಯ್ಯುವುದನ್ನು ಭಾರತದಲ್ಲಿ ನೋಡಿದ್ದೇವೆ. ಆದರೆ, ಕೆಲ ವಿದೇಶಿಗರು ಹಾಗಲ್ಲ ತುರ್ತು ಪರಿಸ್ಥಿತಿಯಲ್ಲೂ ತಮ್ಮ ಪ್ರಾಮಾಣಿಕತೆಯನ್ನು ಅವರು ಮರೆಯುವುದಿಲ್ಲ. ಅಂಥದೊಂದು ಅಪರೂಪದ ಫೋಟೋ ನೆಟ್ಟಿಗರ ಮನ ಗೆದ್ದಿದೆ.
ಟೆಕ್ಸಾಸ್ ರಾಜ್ಯದ ಸ್ಯಾನ್ ಅಂಟೋನಿಯೋದ ಲಿಕ್ವಿಸೆ ಬೊನೈ ವಾಲ್ಡೇಜ್ ಎಂಬ ಮಹಿಳೆ ಫೇಸ್ ಬುಕ್ ನಲ್ಲಿ ಇತ್ತೀಚೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. “ಬಾಗಿಲು ಮುಚ್ಚಿದಾಗಲೂ ನನ್ನ ಅಂಗಡಿ ದುಡಿಯಿತು” ಎಂದು ಕ್ಯಾಪ್ಶನ್ ನೀಡಿ ಅಂಗಡಿಯೊಳಗೆ ಒಂದಷ್ಟು ಹಣ ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟನ್ನು 87 ಸಾವಿರ ಜನ ಮರು ಹಂಚಿಕೊಂಡಿದ್ದಾರೆ.
ಅಪರೂಪದ ಹಳದಿ ಪೆಂಗ್ವಿನ್ ಕ್ಯಾಮರಾದಲ್ಲಿ ಸೆರೆ
ಟೆಕ್ಸಾಸ್ ನಲ್ಲಿ ಭೀಕರ ಶೀತ ಗಾಳಿಗೆ ಅಲ್ಲಿ ವಿದ್ಯುತ್ ಹಾಗೂ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಕುಡಿಯುವ ನೀರಿನ ಪೈಪ್ ಗಳಲ್ಲಿ ಲೋ ಪ್ರೆಶರ್ ಉಂಟಾಗಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವ ಸಾಧ್ಯತೆ ಇದ್ದು, ಅದನ್ನು ಕುದಿಸಿ ಕುಡಿಯುವಂತೆ ಸರ್ಕಾರ ಸೂಚನೆ ನೀಡಿದೆ.
ವಾಲ್ಡೇಜ್ ಎಂಬ ಮಹಿಳೆ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಹೊಂದಿದ್ದು, ಶೀತ ಗಾಳಿಯಿಂದ ಅವರ ಅಂಗಡಿ ಹಲ ದಿನಗಳಿಂದ ಬಂದಾಗೇ ಇತ್ತು. ಅಂಗಡಿ ಹೊರಗೆ ಏಳೆಂಟು ಬಾಕ್ಸ್ ಗಳಲ್ಲಿ 100 ಕುಡಿಯುವ ನೀರಿನ ಪ್ಯಾಕೆಟ್ ಗಳಿದ್ದವು. ಈಗ ಬಂದು ನೋಡಿದರೆ 40 ಕ್ಕೂ ಅಧಿಕ ಪ್ಯಾಕೆಟ್ ಗಳನ್ನು ಜನ ಖಾಲಿ ಮಾಡಿದ್ದಾರೆ. ಆದರೆ, ಅವರು ಅದಕ್ಕಾಗಿ 620 ಡಾಲರ್ ಹಣವನ್ನು ಅಂಗಡಿಯ ಎದುರು ಇಟ್ಟು ಹೋಗಿದ್ದಾರೆ.
https://www.facebook.com/yvonne.fuka.5/posts/261343112250644