ಮನೆಗೆ ಬಾಡಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಐಡಿಯಾವೊಂದನ್ನು ಮಾಡಿರುವ ಲಂಡನ್‌ನ ಜೋಡಿಯೊಂದು ಡಬಲ್-ಡೆಕರ್ ಬಸ್ ಒಂದನ್ನೇ ತಮ್ಮ ಮನೆಯನ್ನಾಗಿ ಪರಿವರ್ತಿಸಿಕೊಂಡಿದೆ.
ಲ್ಯೂಕ್ ವಾಕರ್ (27) ಹಾಗೂ ಚಾರ್ಲಿ ಮ್ಯಾವಿಕಾರ್ (26) ಜೋಡಿ ಮಾಡಿಕೊಂಡಿರುವ ಈ ಬಸ್-ಮನೆಯಲ್ಲಿ ಎಲ್ಲ ರೀತಿಯ ಅಗತ್ಯ ಸೌಕರ್ಯಗಳು ಇವೆ. ಮನೆಯ ಒಳಾಂಗಣದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ.
ಭೂಲೋಕದ ಸ್ವರ್ಗ ರೊಮೇನಿಯಾದ ಆಕರ್ಷಕ ತಾಣಗಳು
2017ರಲ್ಲಿ ವೋಲ್ವೋ ಬಸ್ ಅನ್ನು 2,500 ಪೌಂಡ್‌ಗಳಿಗೆ ಖರೀದಿಸಿತ್ತು ಈ ಜೋಡಿ. 2018ರಲ್ಲಿ ಈ ಬಸ್‌ಗೆ ಅಗತ್ಯ ಮಾರ್ಪಾಡು ಮಾಡಲು 15,000 ಪೌಂಡ್‌ಗಳನ್ನು ಖರ್ಚು ಮಾಡಲಾಗಿತ್ತು. ಕೋವಿಡ್-19 ಸಾಂಕ್ರಮಿಕದಿಂದ ಎಲ್ಲೆಡೆ ಲಾಕ್‌ಡೌನ್ ಆದ ಕಾರಣ ಇದೇ ಮನೆಯನ್ನೇ ಕೆಲಸ ಮಾಡಲು ಬಳಸಿಕೊಂಡಿದ್ದರು ಲ್ಯೂಕ್ ಮತ್ತು ಚಾರ್ಲಿ.
https://www.instagram.com/p/CLWZSXGhDwD/?utm_source=ig_web_copy_link
https://www.instagram.com/p/CLZ8ytvBD-g/?utm_source=ig_web_copy_link