ದುಬೈ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ತಮ್ಮನ್ನು ಯಾಚ್‌ನಲ್ಲಿ ಕಮಾಂಡೋಗಳು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು ವಿವರಿಸುವ ವಿಡಿಯೋವೊಂದನ್ನು ಮಾರ್ಚ್ 4, 2018ರಲ್ಲಿ ಬಿಡುಗಡೆ ಮಾಡಿದ್ದರು ಲತೀಫಾ. ಇದಾದ ಬಳಿಕ ಆಕೆಯ ಬಗ್ಗೆ ಸಾಕಷ್ಟು ಊಹಾಪೋಗಳು ಸುದ್ದಿ ಮಾಡುತ್ತಿದ್ದವು.
ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ ಲತೀಫಾ 2018ರಲ್ಲಿ ದುಬೈನ ತಮ್ಮ ಮನೆಯನ್ನು ಬಿಟ್ಟು ಹೋಗಿದ್ದರು. ಅದೇ ವರ್ಷ ಅವರನ್ನು ಅವರ ಮನೆಗೆ ಮರಳಿ ಕಳುಹಿಸಿಕೊಡಲಾಗಿತ್ತು.
ಜೂಮ್ ಮೀಟಿಂಗ್‌ನಲ್ಲಿದ್ದ ಪತಿಗೆ ಕಿಸ್ ಮಾಡಲು ಬಂದ ಪತ್ನಿ
ತಮ್ಮನ್ನು ತಮ್ಮದೇ ಮನೆಯಲ್ಲಿ ಒತ್ತೆಯಾಗಿ ಇಟ್ಟುಕೊಳ್ಳಲಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದ ಲತೀಫಾ, ಮಾರ್ಚ್ 4, 2018ರಲ್ಲಿ ತಮ್ಮೊಂದಿಗೆ 12-15 ಕಮಾಂಡೋಗಳು ಹಾಗೂ ಇಬ್ಬರು ಅಧಿಕಾರಿಗಳು ಯಾಚ್‌ನಲ್ಲಿ ಬಂದಿದ್ದರು ಎಂದಿದ್ದು, ಇದಾದ ಬಳಿಕ ತಮ್ಮ ಪ್ರಜ್ಞೆ ತಪ್ಪಿಸಿ ಖಾಸಗಿ ಜೆಟ್ ಒಂದರಲ್ಲಿ ತಮ್ಮನ್ನು ಮರಳಿ ಕಳುಹಿಸಲಾಗಿತ್ತು ಎಂದಿದ್ದಾರೆ.
ರಾಜಕೀಯ ಆಶ್ರಯ ಕೋರಿದ್ದ ತಮ್ಮನ್ನು ತಮ್ಮ ಇಚ್ಛೆಯ ವಿರುದ್ಧ ದುಬೈಗೆ ಮರಳಿ ಕಳುಹಿಸಲಾಗಿತ್ತು ಎಂದು ಲತೀಫಾ ಆರೋಪಿಸಿದ್ದಾಗಿ ವರದಿಗಳಲ್ಲಿ ತಿಳಿದು ಬಂದಿದೆ.
ಆದರೆ ಈ ವಿಚಾರವನ್ನೆಲ್ಲಾ ತಳ್ಳಿ ಹಾಕಿರುವ ಲಂಡನ್‌ನಲ್ಲಿರುವ ಯುಎಇ ರಾಯಭಾರ ಕಚೇರಿಯು, ಯುವರಾಣಿ ಕ್ಷೇಮವಾಗಿದ್ದು ಆಕೆಯನ್ನು ಮನೆಯಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದಿದೆ.