ಲೆಯೊನೋರಾ ರೇಮಂಡ್ ಹೆಸರಿನ ಶತಾಯುಷಿ ಮಹಿಳೆಯೊಬ್ಬರು ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಜೀವನಕ್ಕೆ ಬೇಕಾದ ಆಪ್ತ ಸಲಹೆಗಳನ್ನು ಕೊಟ್ಟಿದ್ದಾರೆ ಲೆಯೊನೋರಾ.
’ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈಕೆಯ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಹ್ಯಾಟ್ ಒಂದನ್ನು ಧರಿಸಿ ವರ್ಣರಂಜಿತ ಧಿರಿಸಿನಲ್ಲಿ ಮಿಂಚುತ್ತಿದ್ದಾರೆ. ಜೀವನವನ್ನು ಕಿಂಗ್ ಸೈಜ್‌ನಲ್ಲಿ ಬದುಕಲು ಏನೆಲ್ಲಾ ಮಾಡಬೇಕು ಎಂದು ಐದು ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ ಲೆಯೊನೋರಾ.
ಅವರು ಕೊಟ್ಟ ಸಲಹೆಗಳು ಇಂತಿವೆ:
ದೇಶವಾಸಿಗಳ ಮನಗೆದ್ದಿದೆ ನಾಸಾ ವಿಜ್ಞಾನಿಯ ಆ ಚಿತ್ರ
1. ತೀರಾ ಅಗತ್ಯ ಎನಿಸುವಷ್ಟು ಕಾಲ ಸಿಂಗಲ್ ಆಗಿಯೇ ಇರಿ
2. ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಎಸೆಯಿರಿ
3. ಪ್ರತಿ ವರ್ಷವೂ ಒಂದು ತಿಂಗಳಷ್ಟು ಸಂಬಳವನ್ನು ಉಳಿತಾಯ ಮಾಡಿರಿ.
4. ಜೀವನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಡಿ.
5. ಸ್ಮೈಲ್ ಇಲ್ಲದೇ ಇರುವ ಯಾರನ್ನಾದರೂ ನೀವು ನೋಡಿದಲ್ಲಿ ನಿಮ್ಮ ನಗುವನ್ನೇ ಅವರಿಗೆ ಕೊಡಿ
https://www.instagram.com/p/CLbEmxjJVFe/?utm_source=ig_web_copy_link