ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಡಲ್ಲಾಸ್‌ನಲ್ಲಿ ಹವಾಮಾನದ ತೀವ್ರತೆ ಎಷ್ಟಿದೆ ಎಂದು ವಿವರಿಸಲು ಮುಂದಾದ ಥಾಮಸ್ ಬ್ಲಾಕ್ ಎಂಬವರು ತಮ್ಮ ಮನೆಯ ಸೀಲಿಂಗ್ ಫ್ಯಾನ್‌ನಿಂದ ಹಿಮ ಜೋತು ಬಿದ್ದಿರುವ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. “ನನ್ನ ಅಪಾರ್ಟ್ಮೆಂಟ್‌ನಲ್ಲಿ ಇಷ್ಟು ಚಳಿ ಇದೆ. ಒಬ್ಬ ಟೆಕ್ಸನ್ ಆಗಿ ನಾನು ಖಂಡಿತವಾಗಿಯೂ ಇದಕ್ಕೆಲ್ಲಾ ಒಗ್ಗಿಕೊಂಡಿಲ್ಲ. ಆದರೆ ನಾನು ಕೇರ್ ಮಾಡುವುದಿಲ್ಲ” ಎಂದು ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ದುಬಾರಿ ಗ್ಯಾಸ್ ಬದಲಿಗೆ ವಿದ್ಯುತ್ ಒಲೆ, ಪೆಟ್ರೋಲ್ ಬದಲು ಎಲೆಕ್ಟ್ರಿಕ್ ವಾಹನ –ಕೇಂದ್ರ ಸಚಿವರಿಂದ ಮಹತ್ವದ ಸಲಹೆ
ಫ್ಯಾನ್ ಮೇಲೆ ಮಾತ್ರವಲ್ಲದೇ ಕಟ್ಟಡದ ಗೋಡೆಗಳ ಮೇಲೂ ಸಹ ಹಿಮಗಟ್ಟುತ್ತಿರುವುದನ್ನು ನೋಡಬಹುದಾಗಿದೆ.