ದಿನನಿತ್ಯದ ಸವಾಲುಗಳಿಗೆ ಸುಲಭವಾದ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಭಾರತೀಯರು ಸಿದ್ಧಹಸ್ತರು. ಆದರೆ ಈ ವಿದ್ಯೆಯಲ್ಲಿ ನಮ್ಮವರ ಪಾರುಪತ್ಯಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಎಂಬ ಭೀತಿಯನ್ನು ಆನಂದ್ ಮಹಿಂದ್ರಾ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ, ಲೋಡರ್ ಅಟ್ಯಾಚ್ ಮಾಡಲಾದ ಬೈಕ್ ಮೇಲೆ ಕುಳಿತ ಯುವಕನೊಬ್ಬನ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ.
“ಅಮೆರಿಕದಲ್ಲಿರುವ ನನ್ನ ಮಿತ್ರರೊಬ್ಬರು ಫಾರ್ವಡ್ ಮಾಡಿದ ಚಿತ್ರ ಇದು. ’ಜುಗಾಡ್’ ಚಾಂಪಿಯನ್ಸ್ ಪಟ್ಟವನ್ನು ಕಳೆದುಕೊಳ್ಳುವ ಭೀತಿಯಲ್ಲಿ ನಾವು ಇದ್ದೇವೆ! ಈ ವ್ಯಕ್ತಿ ಮಹಿಂದ್ರಾ ಲೋಡರ್ ಅಟ್ಯಾಚ್‌ಮೆಂಟ್ ಅನ್ನು ತನ್ನ ಬೈಕ್‌ಗೆ ಹುಕ್ ಮಾಡಿದ್ದಾನೆ ಎನಿಸುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಬೇಕು. ಇದರಿಂದ ಒಂದಷ್ಟು ಉಪಯೋಗಗಳು ಇವೆ ಎನಿಸುತ್ತದೆ…..” ಎಂದು ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.