ನವದೆಹಲಿ: ಭಾರತದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ದರಗಳಲ್ಲಿ ಶೇಕಡ 12 ಮತ್ತು ಶೇಕಡ 18 ರಷ್ಟು ತೆರಿಗೆ ಸ್ಲ್ಯಾಬ್ ವಿಲೀನಗೊಳಿಸಲು ಮುಂದಾಗಿದೆ. ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ಶೇಕಡ 12 ಮತ್ತು ಶೇಕಡ 18ರಷ್ಟು ಸ್ಲಾಬ್ ಗಳನ್ನು ವಿಲೀನಗೊಳಿಸಲಾಗುವುದು.
ಕೆಲವು ರಾಜ್ಯಗಳು ಈ ಕುರಿತಾಗಿ ಬೇಡಿಕೆ ಸಲ್ಲಿಸಿದ್ದು 15ನೇ ಹಣಕಾಸು ಆಯೋಗದ ಅನುಮೋದನೆಯೊಂದಿಗೆ ಕೇಂದ್ರ ಸರ್ಕಾರ ಎರಡು ತೆರಿಗೆ ಸ್ಲಾಬ್ ಗಳನ್ನು ವಿಲೀನಗೊಳಿಸುವ ಕುರಿತಾಗಿ ಚರ್ಚೆ ನಡೆದಿದೆ. ಮಾರ್ಚ್ ನಲ್ಲಿ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.