ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಎಡಿಜಿಪಿ ಅಲೋಕ್ ಕುಮಾರ್, ಸಿಬ್ಬಂದಿ ಸ್ನೇಹಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೆಲದಿನಗಳ ಹಿಂದೆ ಕೆ.ಎಸ್.ಆರ್.ಪಿ. ಸಿಬ್ಬಂದಿಯ ಫಿಟ್ನೆಸ್ ಕುರಿತು ಮಹತ್ವದ ಆದೇಶ ಹೊರಡಿಸಿದ್ದ ಅವರು ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ವರ್ಗಾವಣೆ, ಬಡ್ತಿ, ನಿಯೋಜನೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಬೆಂಗಳೂರಿಗೆ ಅಲೆಯಬೇಕಿಲ್ಲ. ಬದಲಾಗಿ ಆನ್ ಲೈನ್ ಮೂಲಕವೇ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದಾಗಿ ದೂರದ ಊರುಗಳಿಂದ ಕೆ.ಎಸ್.ಆರ್.ಪಿ. ಸಿಬ್ಬಂದಿ ಬೆಂಗಳೂರಿಗೆ ಬರುವುದು ತಪ್ಪಿದಂತಾಗಿದೆ.
BIG NEWS: ‘ಡಿಜಿಟಲ್ ಪೇಮೆಂಟ್’ ಕುರಿತಂತೆ RBI ನಿಂದ ಮಹತ್ವದ ಆದೇಶ
ಇದರಿಂದ ಸಿಬ್ಬಂದಿಯ ಶ್ರಮ, ಹಣ ವ್ಯರ್ಥವಾಗುವುದು ತಪ್ಪಿದಂತಾಗಿದ್ದು, ಸಮಯ ಕೂಡ ಉಳಿದಂತಾಗಿದೆ. ಆನ್ಲೈನ್ ಪ್ರಕ್ರಿಯೆ ಮೂಲಕ ಈಗಾಗಲೇ 45 ಮಂದಿ ವರ್ಗಾವಣೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಸಮಂಜಸ ಕಾರಣ ನೀಡಿದರೆ ಮೂರು ತಾಸಿನೊಳಗೆ ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.