ಸಚಿನ್ ಬೇಬಿ ಹಾಗೂ ಅರ್ಜುನ್ ತೆಂಡೂಲ್ಕರ್ ಇಬ್ಬರೂ ಭಿನ್ನ ವ್ಯಕ್ತಿಗಳು ಎಂಬುದು ಕ್ರಿಕೆಟ್ ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಆದರೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಕಾರಣ ಎಲ್ಲೆಡೆಯ ಮಾತಾಗಿದ್ದಾರೆ.
ಕೇರಳದ 32 ವರ್ಷ ವಯಸ್ಸಿನ ಕ್ರಿಕೆಟರ್ ಸಚಿನ್ ಬೇಬಿ ಗುರುವಾರ ನಡೆದ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಕರಿಯಾಗಿದ್ದಾರೆ. ಇದೇ ವೇಳೆ ಟ್ವಿಟರ್ನಲ್ಲಿ ನೆಟ್ಟಿಗರು ಇದೇ ವಿಚಾರವಾಗಿ ಸಖತ್ ಫನ್ನಿ ಟ್ವೀಟ್ಗಳನ್ನು ಹಾಕಿದ್ದಾರೆ.
ESI ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ಸೌಲಭ್ಯ
’ಆರ್ಸಿಬಿ ಖರೀದಿಸಿದ ಸಚಿನ್ ಬೇಬಿ ಆ ಸಚಿನ್ ಅವರ ಬೇಬಿ ಅಲ್ಲ, ಇವರು ಬೇರೆಯ ಸಚಿನ್ ಬೇಬಿ’ ಎಂದು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.