ನವದೆಹಲಿ: ಕೇಂದ್ರ ಸರ್ಕಾರದ 1 ಕೋಟಿ ಉದ್ಯೋಗಿಗಳಿಗೆ ಮುಂದಿನ ತಿಂಗಳು ಹೋಳಿ ಹಬ್ಬಕ್ಕೆ ಮೊದಲು ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲು ಮೋದಿ ಸರ್ಕಾರ ಮುಂದಾಗಿದೆ.
ಹಲವು ತಿಂಗಳಿಂದ ಡಿಎ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ಮೊದಲು ಶೇಕಡ 4 ರಷ್ಟು ಡಿಎ ಹೆಚ್ಚಳಮಾಡುವ ನಿರೀಕ್ಷೆಯಿದ್ದು ಇದರೊಂದಿಗೆ ಶೇಕಡ 21 ರಷ್ಟು ಏರಿಕೆಯಾಗಲಿದೆ.
ಕೇಂದ್ರ ಸರ್ಕಾರ ನೌಕರರಿಗೆ ಶೇಕಡ 17 ರಷ್ಟು ಡಿಎ ನೀಡಲಾಗುತ್ತಿದ್ದು, ಶೇಕಡ 4 ರಷ್ಟು ಡಿಎ ಹೆಚ್ಚಳದಿಂದ ಸುಮಾರು 48 ಲಕ್ಷ ಉದ್ಯೋಗಿಗಳ ವೇತನ ಏರಿಕೆಯಾಗಲಿದೆ. ಜೊತೆಗೆ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಲಾಭ ಸಿಗಲಿದೆ.
ಶೇಕಡ 4 ರಷ್ಟು ಡಿಎ ಬಾಕಿ ನೀಡಲು ಕೂಡ ಚಿಂತನೆ ನಡೆದಿದ್ದು, ಡಿಎ ಹೆಚ್ಚಳವಾದರೆ ಶೇಕಡ 25 ರಷ್ಟು ಏರಿಕೆಯಾಗಬಹುದು. ಆದರೆ, ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಕೇಂದ್ರದ 7ನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಡಿಎ ಹೆಚ್ಚಳ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗಿದೆ.