alex Certify ‌ʼವಾಟ್ಸಾಪ್ʼ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼವಾಟ್ಸಾಪ್ʼ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್

ವಾಟ್ಸಾಪ್​ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು ಇದರಿಂದಾಗಿ ಬಳಕೆದಾರರು ತಮ್ಮ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಾಪ್​ನ್ನು ಲಾಗೌಟ್​ ಮಾಡಬಹುದಾಗಿದೆ.

ಈ ಹೊಸ ಸೌಕರ್ಯದ ಮೂಲಕ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಸಂಸ್ಥೆ ವಾಟ್ಸಾಪ್​ ಖಾತೆ ಡಿಲೀಟ್​ ಆಯ್ಕೆಯನ್ನ ತೆಗೆದು ಹಾಕಿದೆ.

ವಾಟ್ಸಾಪ್​ ಖಾತೆದಾರರಿಗೆ ಪ್ರಸ್ತುತ ತಮ್ಮ ವಾಟ್ಸಾಪ್​ ಖಾತೆಯನ್ನ ಡಿಲೀಟ್​ ಮಾಡುವ ಆಯ್ಕೆ ಇದೆ. ಆದರೆ ಇನ್ಮುಂದೆ ಫೇಸ್​ಬುಕ್​, ಇನ್​ಸ್ಟಾಗ್ರಾಂನಂತೆಯೇ ವಾಟ್ಸಾಪ್​ನಿಂದಲೂ ಲಾಗೌಟ್​ ಮಾಡಬಹುದಾಗಿದೆ.

ಇನ್ನು ಈ ಸಂಬಂಧ ಮಾಹಿತಿ ನೀಡಿರುವ ವಾಟ್ಸಾಪ್​ ಸಂಸ್ಥೆ, ಶೀಘ್ರದಲ್ಲಿಯೇ ಡಿಲೀಟ್​ ಅಕೌಂಟ್​ ಎಂಬ ಆಯ್ಕೆಯನ್ನ ತೆಗೆದು ಲಾಗೌಟ್​ ಆಯ್ಕೆಯನ್ನ ನೀಡಲಿದ್ದೇವೆ. ಐಓಎಸ್​ ಹಾಗೂ ಆಂಡ್ರಾಯ್ಡ್​ಗಳೆರಡಲ್ಲಿಯೂ ಈ ಆಯ್ಕೆ ಸಿಗಲಿದೆ ಎಂದು ಗೇಳಿದೆ.

ಇದರ ಜೊತೆಯಲ್ಲಿ ವಾಟ್ಸಾಪ್​​ ಮಲ್ಟಿ ಡಿವೈಸ್​ ಸಪೋರ್ಟ್ ಎಂಬ ಇನ್ನೊಂದು ಆಯ್ಕೆಯನ್ನ ತರೋಕೆ ಸಿದ್ಧತೆ ನಡೆಸುತ್ತಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದೇ ವಾಟ್ಸಾಪ್​ ಖಾತೆಯನ್ನ ಎರಡ್ಮೂರು ಕಡೆ ಬಳಕೆ ಮಾಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...