ತನ್ನದೇ ಪೇಜ್ ಬ್ಲಾಕ್ ಮಾಡಿ ಅಚ್ಚರಿ ಮೂಡಿಸಿದ ಫೇಸ್ ಬುಕ್ 18-02-2021 3:22PM IST / No Comments / Posted In: Latest News, International ಆಸ್ಟ್ರೇಲಿಯಾ ಹಾಗೂ ಫೇಸ್ಬುಕ್ ನಡುವೆ ಹಗ್ಗಜಗ್ಗಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಡಿಜಿಟಲ್ ಫ್ಲ್ಯಾಟ್ಫಾರ್ಮ್ಗಳಿಗೆ ಫೇಸ್ಬುಕ್ ಹಾಗೂ ಗೂಗಲ್ ಹಣ ಪಾವತಿ ಮಾಡಬೇಕು ಎಂಬ ಎಂಬ ಆಸ್ಟ್ರೇಲಿಯಾ ಸರ್ಕಾರದ ಹೊಸ ನಿಯಮಕ್ಕೆ ಫೇಸ್ಬುಕ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಜನತೆಗೆ ಫೇಸ್ಬುಕ್ ಮೂಲಕ ಯಾವುದೇ ಸುದ್ದಿಗಳನ್ನ ನೋಡಲು ಹಾಗೂ ಹಂಚಿಕೊಳ್ಳಲು ಇರುವ ಅವಕಾಶಕ್ಕೆ ಫೇಸ್ಬುಕ್ ನಿರ್ಬಂಧ ಹೇರಿದೆ. ಆಸ್ಟ್ರೇಲಿಯಾದ ಸಂಪಾದಕರು ಯಾವುದೇ ವರದಿಯನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಬಹುದಾಗಿದೆ. ಆದರೆ ಈ ಲಿಂಕ್ಗಳನ್ನ, ಪೋಸ್ಟ್ಗಳನ್ನ ಆಸ್ಟ್ರೇಲಿಯನ್ನರಿಗೆ ನೋಡಲು ಸಾಧ್ಯವಿಲ್ಲ ಎಂದು ಅಮೆರಿಕ ಮೂಲದ ಫೇಸ್ಬುಕ್ ಕಂಪನಿ ಹೇಳಿದೆ. ಆಸ್ಟ್ರೇಲಿಯಾ ಫೇಸ್ಬುಕ್ ಬಳಕೆದಾರರು ಆಸ್ಟ್ರೇಲಿಯಾದ ಅಥವಾ ವಿಶ್ವದ ಯಾವುದೇ ಸುದ್ದಿಗಳನ್ನ ಶೇರ್ ಮಾಡಲು ಸಾಧ್ಯವಿಲ್ಲ. ನ್ಯೂಸ್ ಪೇಜ್ಗಳನ್ನ ಫೇಸ್ಬುಕ್ ಬ್ಲಾಕ್ ಮಾಡುತ್ತಿರೋದ್ರಿಂದ ಕೋವಿಡ್ ಮಾಹಿತಿ, ಚಂಡಮಾರುತ ಸೇರಿದಂತೆ ಹವಾಮಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳೋದು ಆಸ್ಟ್ರೇಲಿಯನ್ನರಿಗೆ ಕಷ್ಟವಾಗ್ತಿದೆ. ನ್ಯೂಸ್ ಪೇಜ್ನ್ನು ಬ್ಲಾಕ್ ಮಾಡಿದ ವೇಳೆ ಫೇಸ್ ಬುಕ್ ತನ್ನ ಪೇಜ್ನ್ನೂ ಬ್ಲಾಕ್ ಮಾಡಿಕೊಂಡಿದೆ. ಹೀಗಾಗಿ ಈ ಫೇಸ್ಬುಕ್ ಪೇಜ್ನಲ್ಲಿ ಈಗ ನೋ ಪೋಸ್ಟ್ ಯೆಟ್ ಎಂದು ಕಾಣಿಸುತ್ತಿದೆಯಂತೆ. Facebook has banned Facebook's own Facebook page pic.twitter.com/bvZGRaO77H — Andrew Brown (@AndrewBrownAU) February 17, 2021