ನಟಿ ಅನುಪಮಾ ಪರಮೇಶ್ವರನ್ 2015ರಂದು ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ಸಾಕಷ್ಟು ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದು, 2019ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ನಟಸಾರ್ವಭೌಮ’ ಸಿನಿಮಾದಲ್ಲಿ ಶ್ರುತಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ನಟಿ ಅನುಪಮಾ ಪರಮೇಶ್ವರನ್ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ರಜನಿ ಅಭಿಮಾನಿ ʼಚಾಯ್ ವಾಲಾʼನ ಕೈ ಚಳಕಕ್ಕೆ ನೆಟ್ಟಿಗರು ಫಿದಾ
ನಟಿ ಅನುಪಮಾ ಪರಮೇಶ್ವರನ್ 1996 ಫೆಬ್ರವರಿ 18ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಕಷ್ಟು ಸಿನಿತಾರೆಯರು ಸಾಮಾಜಿಕ ಜಾಲತಾಣದಲ್ಲಿ ಅನುಪಮಾ ಪರಮೇಶ್ವರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.