ಸ್ಮಾರ್ಟ್ಫೋನ್ಗಳಲ್ಲಿ ಅಶ್ಲೀಲ ಕಂಟೆಂಟ್ ನೋಡುವ ಮಂದಿಯ ಮೇಲೆ ಕಣ್ಣಿಡಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದು ಈ ಸಂಬಂಧ ದೇಶಾದ್ಯಂತ ಪರ/ವಿರೋಧದ ಚರ್ಚೆಗಳು ಭುಗಿಲೆದ್ದಿವೆ.
ಜನಸಾಮಾನ್ಯರ ಅಂತರ್ಜಾಲ ಸರ್ಚ್ ಡೇಟಾ ಮೇಲೆ ಕಣ್ಣಿಡಲಿರುವ ಉ.ಪ್ರ. ಪೊಲೀಸ್, ಯಾವುದಾರೂ ವ್ಯಕ್ತಿ ಅಶ್ಲೀಲ ಚಿತ್ರ ಸರ್ಚ್ ಮಾಡುವುದು ಕಂಡು ಬಂದಲ್ಲಿ ’ಉ.ಪ್ರ. ಮಹಿಳಾ ಪವರ್ಲೈನ್ 1090’ಅನ್ನು ಅಲರ್ಟ್ ಮಾಡಲಾಗುವುದು. ಈ ಅಲರ್ಟ್ಗಳ ಬೆನ್ನತ್ತಲಿರುವ ಪೊಲೀಸರ ತಂಡವೊಂದು ಸಂಬಂಧಪಟ್ಟ ವ್ಯಕ್ತಿಯ ಮನೆ ತಲುಪಿ, ’ಮಹಿಳೆ ವಿರುದ್ಧ ಆಗುವ ಅಪರಾಧ’ ತಡೆಗಟ್ಟಲು ಮುಂದಾಗಲಿದೆ.
ಫಾಸ್ಟ್ಯಾಗ್ ಕಡ್ಡಾಯ ಬೆನ್ನಲ್ಲೇ ವಾಹನ ಸವಾರರಿಗೆ ಮತ್ತೊಂದು ಶಾಕ್: ವಂಚಕರ ಬಗ್ಗೆ ಎಚ್ಚರಿಕೆಗೆ ಸೂಚನೆ
ಪ್ರಾಯೋಗಿಕ ಹಂತದಲ್ಲಿ ಆರು ಜಿಲ್ಲೆಗಳಲ್ಲಿ ಮಾಡಲಾದ ಈ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬಳಿಕ ಇದೀಗ ರಾಜ್ಯಾದ್ಯಂತ ಈ ಕೆಲಸ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪವರ್ಲೈನ್ 1090ರ ಮುಖಾಂತರ ಸಾರ್ವಜನಿಕರು ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬಹುದಾಗಿದೆ ಎನ್ನುತ್ತಾರೆ ಹೆಚ್ಚುವರಿ ಮಹಾ ನಿರ್ದೇಶಕರಾದ ನೀರಾ ರಾವತ್.