ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಹೋದರಿಯ ಪುತ್ರಿ ಮೀನಾ ಹ್ಯಾರಿಸ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯ ಬಿರುಗಾಳಿಯಲ್ಲಿ ಸಿಲುಕಿದ್ದಾರೆ.
ತನ್ನ ಬ್ರಾಂಡ್ ಅನ್ನು ಪ್ರಮೋಟ್ ಮಾಡಲು ಚಿಕ್ಕಮ್ಮನ್ನ ಹೆಸರನ್ನು ಬಳಸದೇ ಇರಲು ಶ್ವೇತ ಭವನದಿಂದ ಮೀನಾ ಎಚ್ಚರಿಕೆ ಪಡೆದುಕೊಂಡಿದ್ದಾರೆ.
ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಮೀನಾಕ್ಷಿ ಭವನದಲ್ಲಿ ಉಪಹಾರ ಸವಿದ ಸಿಎಂ
ಹಾರ್ವರ್ಡ್‌ನಲ್ಲಿ ಕಾನೂನು ಪದವಿ ಪಡೆದಿರುವ ಮೀನಾ ತಮ್ಮ ಮಲತಂದೆ ಟೋನಿ ವೆಸ್ಟ್ ಜೊತೆಗೆ ಒಂದಷ್ಟು ದಿನ ಊಬರ್‌ನಲ್ಲಿ ಕೆಲಸ ಮಾಡಿದ್ದರು. ಇದೀಗ ಉದ್ಯಮವೊಂದನ್ನು ನಡೆಸುತ್ತಿರುವ ಮೀನಾ, ’ಫೆನಾಮಿನಲ್’ ಹೆಸರಿನಲ್ಲಿ, ಸಾಮಾಜಿಕ ಸಂದೇಶಗಳನ್ನು ಪ್ರಿಂಟ್ ಮಾಡಲಾದ ಟೀ-ಶರ್ಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳಲ್ಲಿ ಅನೇಕ ಶರ್ಟ್‌ಗಳನ್ನು ಮೀನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ಇದೇ ವೇಳೆ ಕಮಲಾ ಜೊತೆಗೆ ಸೆರೆ ಹಿಡಿಸಿಕೊಂಡಿರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ತನ್ನ ವೈಯಕ್ತಿಕ ಬ್ರಾಂಡ್ ಅನ್ನು ಪ್ರಮೋಟ್ ಮಾಡಿಕೊಳ್ಳಲು ಮೀನಾ ತಮ್ಮ ಚಿಕ್ಕಮ್ಮ ಕಮಲಾ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷ ಜೋ ಬಿಡೆನ್ ಸರ್ಕಾರದ ಅನೇಕ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಬಿಡೆನ್ ತಂಡದ ವಕೀಲರು ಮೀನಾಗೆ ಬುದ್ಧಿಮಾತು ಹೇಳಿದ್ದಾರೆ.