ಕೋವಿಡ್-19 ಲಸಿಕೆ ಕಾರ್ಯಕ್ರಮ ಮೊದಲ ಹಂತ ಚಾಲ್ತಿಯಲ್ಲಿರುವಂತೆಯೇ ದೇಶಾದ್ಯಂತ ಈ ಲಸಿಕೆಯು ವ್ಯಾಪಕವಾಗಿ ಯಾವಾಗ ಲಭ್ಯವಾಗಲಿದೆ ಎಂಬ ಪ್ರಶ್ನೆಗಳು ಉದ್ಭವವಾಗತೊಡಗಿವೆ.
ವರ್ಷಾಂತ್ಯ ಅಥವಾ ಅದಕ್ಕೂ ಮುನ್ನವೆ ಈ ಲಸಿಕೆಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ ಎಂದು ಏಮ್ಸಕ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಬುಧವಾರ ಕೋವಿಡ್-19ನ ಎರಡನೇ ಡೋಸ್ ಹಾಕಿಸಿಕೊಂಡ ಗುಲೇರಿಯಾ, “ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ 50 ವರ್ಷ ದಾಟಿದ ಅಶಕ್ತ ಜನರಿಗೆ ಲಸಿಕೆ ಹಾಕುವ ಗುರಿ ತಲುಪಿದ ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಾಗಲಿದೆ” ಎಂದು ಹೇಳಿದ್ದಾರೆ.
ದೇಶದ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಸಂಬಂಧ ಯಾವುದೇ ಸಾವುಗಳು ಕಂಡು ಬರದೇ ಇರುವ ವೇಳೆ ಏಮ್ಸ್ ನಿರ್ದೇಶಕರ ಈ ಹೇಳಿಕೆ ಬಂದಿದೆ.
ಬುಧವಾರ ಬೆಳಿಗ್ಗೆ ವೇಳೆಗೆ, 1,91,373 ಸೆಶನ್ಗಳಲ್ಲಿ 90 ಲಕ್ಷದಷ್ಟು ಲಸಿಕೆಗಳನ್ನು ಫಲಾನುಭವಿಗಳಿಗೆ ಕೊಡಲಾಗಿದೆ.