ವೀಕೆಂಡ್ ಬಂತು ಅಂದ್ರೆ ಏನಾದ್ರೂ ಸ್ಪೆಷಲ್ ಆಗಿರೋದನ್ನು ತಿನ್ನೋಣ ಅಂತಾ ಆಸೆಯಾಗೋದು ಸಹಜ. ಹೋಟೆಲ್ ಗೆ ಹೋಗಿ ಜಂಕ್ ಫುಡ್ ತಿನ್ನೋ ಬದಲು ಮನೆಯಲ್ಲೇ ಸಿಂಪಲ್ ಆಗಿ, ಸಖತ್ತಾಗಿರೋ ತಿಂಡಿಯನ್ನು ನೀವು ತಿನ್ಬಹುದು.
ಕೇವಲ 10 ನಿಮಿಷಗಳಲ್ಲಿ ರೆಡಿಯಾಗೋ ವಿಶೇಷ ತಿನಿಸೊಂದನ್ನು ನಾವ್ ನಿಮಗೆ ಹೇಳಿಕೊಡ್ತೀವಿ. ಅದೇ ಇನ್ ಸ್ಟಂಟ್ ಬ್ರೆಡ್ ಇಡ್ಲಿ.
ಬ್ರೆಡ್ ಇಡ್ಲಿಗೆ ಬೇಕಾಗುವ ಸಾಮಗ್ರಿ:
-ನಾಲ್ಕು ಸ್ಲೈಸ್ ಬ್ರೆಡ್
-ಇಡ್ಲಿ ರವೆ ಒಂದು ಕಪ್
-ರುಚಿಗೆ ತಕ್ಕಷ್ಟು ಉಪ್ಪು
-ಒಂದು ಕಪ್ ಮೊಸರು
-ಚಿಟಿಕೆ ಬೇಕಿಂಗ್ ಸೋಡಾ
-ಅಗತ್ಯಕ್ಕೆ ತಕ್ಕಷ್ಟು ನೀರು
ಬ್ರೆಡ್ ಇಡ್ಲಿ ಮಾಡುವ ವಿಧಾನ : ನಾಲ್ಕು ಸ್ಲೈಸ್ ಬ್ರೆಡ್ ತೆಗೆದುಕೊಂಡು ಅದರ ಅಂಚನ್ನು ಕತ್ತರಿಸಿಕೊಳ್ಳಿ. ಬ್ರೆಡ್ಡನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ಪುಡಿ ಮಾಡಿದ ಬ್ರೆಡ್ ಗೆ ಒಂದು ಕಪ್ ಇಡ್ಲಿ ರವಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ನಂತರ ಒಂದು ಕಪ್ ಮೊಸರು ಸೇರಿಸಿ ಮಿಕ್ಸ್ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಮೇಲೆ ಸ್ವಲ್ಪ ನೀರು ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಇಡಿ.
ನಂತರ ಚಿಟಿಕೆ ಬೇಕಿಂಗ್ ಸೋಡಾ ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಲ್ಲಿ ಹಿಟ್ಟು ಹಾಕಿ 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಇನ್ ಸ್ಟಂಟ್ ಬ್ರೆಡ್ ಇಡ್ಲಿ ರೆಡಿ. ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಬ್ರೆಡ್ ಇಡ್ಲಿ ಇನ್ನೂ ಟೇಸ್ಟ್.