ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಲಸಿಕೆ ವಿಷ್ಯದಲ್ಲಿ ದೊಡ್ಡ ತಪ್ಪು ಹೊರಬಿದ್ದಿದೆ. ಕೊರೊನಾ ಪರೀಕ್ಷೆಗೊಳಗಾದ ಸಾವಿರಾರು ಮಂದಿ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. ಲಸಿಕೆಗಾಗಿ ಕೋವಿಡ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿರುವ ಸಾವಿರಾರು ಆರೋಗ್ಯ ಕಾರ್ಯಕರ್ತರ ಹೆಸರು ಒಂದೇ ಮೊಬೈಲ್ ಸಂಖ್ಯೆಯಲ್ಲಿದೆ. ಇದ್ರಿಂದಾಗಿ ಎರಡನೇ ಡೋಸ್ ಬಗ್ಗೆ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ಸಿಗ್ತಿಲ್ಲ.
ಈ ವಿಷ್ಯ ಮುಖ್ಯಮಂತ್ರಿ ತಲುಪಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಮಾನವ ದೋಷ. ಇದನ್ನು ಸರಿಪಡಿಸಲಾಗ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ. ಇದ್ರಿಂದ ಕೊರೊನಾ ಲಸಿಕೆ ಅಭಿಯಾನಕ್ಕೆ ಯಾವುದೇ ಅಡ್ಡಿಯಾಗಿಲ್ಲ. ತನಿಖೆಗೆ ಆದೇಶ ನೀಡಲಾಗಿದೆ ಎಂದು ಅವ್ರು ಹೇಳಿದ್ದಾರೆ.
ಫೆಬ್ರವರಿ 11 ರಂದು ಎನ್‌ಎಚ್‌ಎಂ ವರದಿ ಪ್ರಕಾರ, ರಾಜ್ಯದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ 1,37,454 ಉದ್ಯೋಗಿಗಳ ಮೊಬೈಲ್ ಸಂಖ್ಯೆ ಒಂದೇ ಆಗಿದೆ. ಇದ್ರಲ್ಲಿ 83598 ಆರೋಗ್ಯ ಕಾರ್ಯಕರ್ತರು, 32422 ಮಂದಿ ನಗರ ಆಡಳಿತ ಮತ್ತು ವಸತಿ ಇಲಾಖೆಯ ಸಿಬ್ಬಂದಿ, ಕಂದಾಯ ಇಲಾಖೆಯ 6977 ಸಿಬ್ಬಂದಿ, ಗೃಹ ಇಲಾಖೆಯ 7338 ಸಿಬ್ಬಂದಿ ಮತ್ತು ಪಂಚಾಯತಿ ರಾಜ್ ಇಲಾಖೆಯ 119 ಉದ್ಯೋಗಿಗಳು ಸೇರಿದ್ದಾರೆ.