ಪ್ರೇಮಿಗಳ ದಿನದಂದು ತನ್ನ ಪ್ರೇಯಸಿಯ ಮನವೊಲಿಸುವ ಸಲುವಾಗಿ ಲೋಹದ ರಿಂಗ್ ಒಂದನ್ನ ಬಳಸಿ ಶಿಶ್ನದ ಗಾತ್ರವನ್ನ ಹಿಗ್ಗಿಸಲು ಹೋದ ಪ್ರಿಯತಮ ಪೇಚಿಗೆ ಸಿಕ್ಕ ಘಟನೆ ವರದಿಯಾಗಿದೆ.
ಬ್ಯಾಂಕಾಂಕ್ನ ವ್ಯಕ್ತಿಯೊಬ್ಬ ಲೋಹದ ರಿಂಗ್ ಬಳಸಿ ತನ್ನ ಶಿಶ್ನದ ಗಾತ್ರವನ್ನ ಹೆಚ್ಚಿಸೋಕೆ ಮುಂದಾಗಿದ್ದಾನೆ. ಆದರೆ ಈತನ ಈ ಪ್ಲಾನ್ ಕೆಲವೇ ಗಂಟೆಗಳಲ್ಲಿ ಆತನಿಗೇ ಉಲ್ಟಾ ಹೊಡೆದಿದೆ. ಆ ಲೋಹದ ರಿಂಗ್ ಆತನ ಶಿಶ್ನದ ಸುತ್ತ ಸಿಕ್ಕಿ ಹಾಕಿಕೊಂಡ ಪರಿಣಾಮ ಆಸ್ಪತ್ರೆಯತ್ತ ಓಡಿದ್ದಾನೆ.
ಮಾರನೇ ದಿನ ಅವನ ಶಿಶ್ನ ಊದಿಕೊಳ್ಳಲು ಆರಂಭಿಸಿದೆ. ಮಾತ್ರವಲ್ಲದೇ ವಿಪರೀತ ನೋವನ್ನ ಅನುಭವಿಸಿದ್ದಾನೆ. ಆತ ಆ ಲೋಹದ ಉಂಗುರವನ್ನ ತೆಗೆದು ಹಾಕಬೇಕು ಎಂದು ಮಾಡಿದ ಪ್ರಯತ್ನವೆಲ್ಲವೂ ವಿಫಲವಾಗಿದೆ.
ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ
ನನ್ನ ಶಿಶ್ನವನ್ನ ಎಲ್ಲಿ ಕತ್ತರಿಸಬೇಕಾಗುತ್ತದೆಯೋ ಎಂದು ನಾನು ಭಯಬೀತನಾಗಿದ್ದೆ. ಶಿಶ್ನ ಬೇರೆ ಊದಿಕೊಂಡಿದ್ದರಿಂದ ಸಿಡಿದೇ ಹೋಗುತ್ತದೆ ಎಂದು ಭಾವಿಸಿದ್ದೆ ಎಂದು ಆ ವ್ಯಕ್ತಿ ತನ್ನ ಆತಂಕವನ್ನ ಹೊರ ಹಾಕಿದ್ದಾನೆ.
ಸತತ ಒಂದು ಗಂಟೆಗಳ ಕಾಲ ಚಿಕಿತ್ಸೆ ಕೈಗೊಂಡ ವೈದ್ಯರು ಆ ಉಂಗುರವನ್ನ ತುಂಡರಿಸಿದ್ದಾರೆ. ಉಂಗುರವು 3 ಸೆಂಟಿ ಮೀಟರ್ ವ್ಯಾಸವನ್ನ ಹೊಂದಿತ್ತು ಹಾಗೂ 1.5 ಸೆ.ಮೀ ದಪ್ಪದಾಗಿತ್ತು ಎನ್ನಲಾಗಿದೆ.