ಈ ವರ್ಷ ಮೇ 18ರಂದು ಬದ್ರಿನಾಥ್ ದೇವಾಲಯವು ಭಕ್ತರಿಗಾಗಿ ತೆರೆಯಲಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ದೇವಾಲಯದ ದ್ವಾರಗಳು ಚಳಿಗಾಲದ ಆರಂಭದ ಅವಧಿಯಲ್ಲಿ ಮುಚ್ಚಲ್ಪಡುತ್ತದೆ. ಈ ಸಮಯದಲ್ಲಿ ಹಿಮಪಾತವಾಗೋದ್ರಿಂದ ಈ ರೀತಿ ದೇವಾಲಯಗಳನ್ನ ಬಂದ್ ಮಾಡಲಾಗುತ್ತೆ. ಮೇ 18ರಂದು ಮುಂಜಾನೆ 4:15ರಿಂದ ದೇವಸ್ಥಾನ ಭಕ್ತರ ಪ್ರವೇಶಕ್ಕೆ ಮುಕ್ತವಾಗಲಿದೆ.
ಹಿಮಾಲಯದ ದೇವಾಲಯವನ್ನ ಇದೇ ಪವಿತ್ರ ಮುಹೂರ್ತದಲ್ಲಿ ತೆರೆಯುವ ನಿರ್ಧಾರವನ್ನ ನರೇಂದ್ರ ನಗರ ಪ್ಯಾಲೇಸ್ನಲ್ಲಿ ವಸಂತ ಪಂಚಮಿ ದಿನದಂದು ನಡೆದ ಕಾರ್ಯಕ್ರಮದಲ್ಲಿ ನಿರ್ಧರಿಸಲಾಗಿದೆ.
ದೇಗುಲದ ದ್ವಾರವನ್ನ ತೆರೆಯೋದಕ್ಕೂ ಮುನ್ನ ಅರಮನೆಯಿಂದ ದೇವಾಲಯಕ್ಕೆ ಕಳುಹಿಸಿಕೊಡಲಾಗುವ ಗಡು ಘಟಾ ಏಪ್ರಿಲ್ 29ರಂದು ಬದ್ರಿನಾಥ್ ಕಡೆ ಪ್ರಯಾಣ ಬೆಳೆಸಲಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಹರಡಿದ ಕಾರಣದಿಂದಾಗಿ ಬದ್ರಿನಾಥ್ ಕಳೆದ ವರ್ಷ ತಡವಾಗಿ ಪ್ರಾರಂಭವಾಯಿತು. ಹಾಗೂ ಯಾತ್ರಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಕಂಡಿದೆ.