
ಕೊರೊನಾ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಧ್ಯೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಿವೆ. ಜಿಯೋ ಮಾರುಕಟ್ಟೆಗೆ ಬರ್ತಿದ್ದಂತೆ ಗ್ರಾಹಕರು ಖುಷಿಯಾಗಿದ್ದರು. ಒಂದೇ ಸಮನೆ ಏರ್ತಿದ್ದ ಟೆಲಿಕಾಂ ಯೋಜನೆಗಳ ಬೆಲೆ ಜಿಯೋ ನಂತ್ರ ಇಳಿಕೆ ಕಂಡಿತ್ತು.
ಆದ್ರೆ ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಲು ಸಿದ್ಧವಾಗಿವೆ. ಗ್ರಾಹಕರು ಡೇಟಾ ಮತ್ತು ಧ್ವನಿ ಕರೆಗಾಗಿ ಮೊದಲಿಗಿಂತ ಹೆಚ್ಚಿನ ಹಣವನ್ನು ಇನ್ಮುಂದೆ ಪಾವತಿಸಬೇಕಾಗುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ ಏಪ್ರಿಲ್ 1 ರಿಂದ ನೆಟ್‌ವರ್ಕ್ ಪೂರೈಕೆದಾರರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಸುಂಕದ ಬೆಲೆ ಏರಿಕೆಗೆ ನಿರ್ಧರಿಸಿದ್ದಾರೆ. ಕಳೆದ ವರ್ಷವೂ ಕೆಲವು ನೆಟ್‌ವರ್ಕ್ ಪ್ರೊವೈಡರ್ ಕಂಪನಿಗಳು ತಮ್ಮ ಸುಂಕದ ದರವನ್ನು ಹೆಚ್ಚಿಸಿವೆ.
ಮುಂಬರುವ ಎರಡು ವರ್ಷಗಳಲ್ಲಿ ಉದ್ಯಮದ ಆದಾಯವು ಶೇಕಡಾ 11 ರಿಂದ 13 ರಷ್ಟು ಮತ್ತು ಈ ಹಣಕಾಸು ವರ್ಷದಲ್ಲಿ ಇದು ಸುಮಾರು ಶೇಕಡಾ 38 ಕ್ಕಿಂತ ಹೆಚ್ಚಾಗುತ್ತದೆ ಎನ್ನಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಎಲ್ಲಾ ಕೈಗಾರಿಕಾ ಕ್ಷೇತ್ರದ ಮೇಲೆ ಪ್ರಭಾವ ಬೀರಿದೆ. ಆದ್ರೆ ಟೆಲಿಕಾಂ ಉದ್ಯಮದ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದ ಜನರು ಹೆಚ್ಚಿನ ಪ್ರಮಾಣದಲ್ಲಿ ಇಂಟರ್ನೆಟ್ ಬಳಕೆ ಮಾಡಿದ್ದಾರೆ.