ಪತಿಯನ್ನು ಹಂಚಿಕೊಳ್ಳುವ ಕಥೆಯನ್ನು ಸಿನಿಮಾದಲ್ಲಿ ನೋಡಿರ್ತೀರಿ. ಆದ್ರೆ ರಾಂಚಿಯಲ್ಲಿ ಇಂಥಹ ಘಟನೆಯೊಂದು ನಡೆದಿದೆ. ಪತ್ನಿ ಹಾಗೂ ಪ್ರೇಮಿ, ಪತಿಯನ್ನು ಹಂಚಿಕೊಂಡಿದ್ದಾರೆ. ಮೂರು ದಿನ ಪತ್ನಿ ಜೊತೆ, ಮೂರು ದಿನ ಪ್ರೇಮಿ ಜೊತೆ ಪತಿ ಇರಬೇಕು. ಒಂದು ದಿನ ಅವನಿಗಿಷ್ಟವಾದಂತೆ ಕಳೆಯಬಹುದು.
ರಾಂಚಿಯ ರಾಜೇಶ್ ಎಂಬಾತನಿಗೆ ಮದುವೆಯಾಗಿ ಒಂದು ಮಗುವಿದೆ. ಆದ್ರೆ ಇದನ್ನು ಮುಚ್ಚಿಟ್ಟು ಇನ್ನೊಬ್ಬಳನ್ನು ಪ್ರೀತಿಸಿದ್ದ. ಓಡಿ ಹೋಗಿ ಮದುವೆಯಾದ. ಆಗ ಪತಿ ಎರಡನೇ ಮದುವೆ ವಿಷ್ಯ ಪತ್ನಿಗೆ ಗೊತ್ತಾಗಿತ್ತು. ಆಕೆ ಪೊಲೀಸರಿಗೆ ದೂರು ನೀಡಿದ್ದಳು. ವಿಚಾರಣೆ ನಡೆಸಿದ್ದ ಪೊಲೀಸರು ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ರಾಜೇಶ್ ಮೂರು ದಿನ ಮೊದಲ ಪತ್ನಿ ಜೊತೆಗಿರಬೇಕು. ಮತ್ತೆ ಮೂರು ದಿನ ಪ್ರೇಮಿ ಜೊತೆಗಿರಬೇಕು. ಒಂದು ದಿನ ಅವನಿಗಿಷ್ಟ ಬಂದಂತೆ ಇರಬಹುದು ಎಂದಿತ್ತು.
ಆದ್ರೆ ಈಗ ಎರಡನೇ ಪತ್ನಿ ಕೋರ್ಟ್ ಮೊರೆ ಹೋಗಿದ್ದಾಳೆ. ಮೊದಲ ಮದುವೆ ಮುಚ್ಚಿಟ್ಟು ರಾಜೇಶ್ ಮೋಸ ಮಾಡಿದ್ದಾನೆ. ಹಾಗೆ ಲೈಂಗಿಕ ಶೋಷಣೆ ನೀಡ್ತಿದ್ದಾನೆಂದು ಎಫ್ಐಆರ್ ದಾಖಲಿಸಿದ್ದಳು. ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ರಾಜೇಶ್ ಬಂಧನಕ್ಕೆ ಆದೇಶ ನೀಡಿದೆ.