ಗಡಿ ಭಾಗದಲ್ಲಿ ಪ್ರತಿಭಟನೆ ಹೂಡಿರುವ ರೈತರಿಗೆ ಹಣ, ಮದ್ಯ, ತುಪ್ಪ, ತರಕಾರಿಗಳನ್ನು ನೀಡುವಂತೆ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕಿ ಕರೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಹರಿಯಾಣದ ಜಿಂದ್ ಪ್ರಾಂತ್ಯದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಆಂದೋಲನದ ವೇಳೆ ಪಕ್ಷದ ನಾಯಕಿ ವಿದ್ಯಾದೇವಿ ಅವರು ಈ ಹೇಳಿಕೆ ನೀಡಿದ್ದು, ವಿವಾದಕ್ಕೆ ಗುರಿಯಾಗಿದೆ.
ಚುನಾವಣೆಗಳಲ್ಲಿ ಸೋಲುಂಡು ನಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ಗಡಿ ಪ್ರದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟವು ನಮಗೆ ಅಸ್ತಿತ್ವ ಉಳಿಸಿಕೊಡಲಿದೆ. ನಾವಿನ್ನು ಆ ಹೋರಾಟವನ್ನು ಮುನ್ನಡೆಸಬೇಕು. ರೈತರಿಗೆ ಶಕ್ತಿ ತುಂಬಬೇಕು.
ಚುನಾವಣೆ ಹೊಸ್ತಿಲಲ್ಲೇ ‘ದೀದಿ’ ಸರ್ಕಾರದಿಂದ ಮಹತ್ವದ ಘೋಷಣೆ
ಪ್ರತಿಭಟನಾನಿರತ ರೈತರಿಗೆ ಹಣ, ಮದ್ಯ , ತುಪ್ಪ, ತರಕಾರಿ ಸರಬರಾಜು ಮಾಡಬೇಕು. ಪ್ರತಿಭಟನೆಗಳು ಎಲ್ಲ ರೀತಿಯ ಜನರನ್ನೂ ಸೆಳೆಯುತ್ತವೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅವಶ್ಯಕತೆಗಳಿರುತ್ತವೆ. ಹೀಗಾಗಿ ರೈತ ಹೋರಾಟವನ್ನು ವಿಭಿನ್ನ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದರು.
ಇಷ್ಟೆಲ್ಲ ನಡೆಯುವಾಗ ಶಾಸಕ ಸಫಿದೋನ್ ಸುಭಾಷ್ ಗಂಗೂಲಿ ಸೇರಿದಂತೆ ಇನ್ನಿತರ ನಾಯಕರಿದ್ದರು. ವಿದ್ಯಾದೇವಿಯ ಭಾಷಣ ನಿಲ್ಲಿಸಲು ಪ್ರಯತ್ನಿಸಿದರೂ ಪ್ರಯೋಜನ ಆಗಲೇ ಇಲ್ಲ.